ವಿಜಯಪುರ: ಜಿಲ್ಲೆಯಲ್ಲಿ ಇಂದು 107 ಹೊಸದಾಗಿ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಲ್ಲಿವರೆಗೆ ಜಿಲ್ಲೆಯಲ್ಲಿ 8279 ಜನರಿಗೆ ಸೋಂಕು ತಗುಲಿದೆ.
ವಿಜಯಪುರ ಜಿಲ್ಲೆಯಲ್ಲಿಂದು 107 ಮಂದಿಗೆ ಕೊರೊನಾ ಪಾಸಿಟಿವ್ - new corona cases
ವಿಜಯಪುರ ಜಿಲ್ಲೆಯ ಇಂದಿನ ಕೊರೊನಾ ಅಪ್ಡೇಟ್ ಹೀಗಿದೆ. ಸೋಂಕಿನಿಂದ ಇಂದು ಇಬ್ಬರು ಮೃತಪಟ್ಟರೆ 74 ಜನ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ವಿಜಯಪುರ ಜಿಲ್ಲೆಯ ಇಂದಿನ ಕೊರೊನಾ ಅಪ್ಡೇಟ್
ಇಂದು ಕೊರೊನಾದಿಂದ 74 ಜನ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 7333ಕ್ಕೆ ಏರಿಕೆಯಾಗಿದೆ. ನಾನಾ ಕಾಯಿಲೆ, ಕೊರೊನಾ ಸೋಂಕಿನಿಂದ ಇಂದು ಇಬ್ಬರು ಸಾವನ್ನಪ್ಪಿದ್ದಾರೆ.
ಮೃತರ ಅಂತ್ಯ ಸಂಸ್ಕಾರವನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ. ವಿಜಯಪುರ ಜಿಲ್ಲಾಸ್ಪತ್ರೆ, ನಾನಾ ಖಾಸಗಿ ಆಸ್ಪತ್ರೆಗಳಲ್ಲಿ 804 ಜನರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.