ವಿಜಯಪುರ:ಜೋಳದ ಮೂಟೆಗಳು ತುಂಬಿದ ಬಂಡಿ 5 ಕಿ.ಮೀ ಎಳೆದು 16 ವರ್ಷದ ಬಾಲಕರು ಶಕ್ತಿ ಪ್ರದರ್ಶನ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ಆಕಾಶ ತಳವಾರ ಹಾಗೂ ಪ್ರಶಾಂತ ಸಾತಿಹಾಳ ಎಂಬ ಬಾಲಕರು 650 ಕೆ.ಜಿ ಮೂಟೆಗಳ ತುಂಬಿದ ಚಕ್ಕಡಿ ಬಂಡಿಯನ್ನು 5 ಕಿ.ಮೀ ಎಳೆದು ಸಾಹಸ ಪ್ರದರ್ಶನ ಮಾಡಿದ್ದಾರೆ.
650 ಕೆಜಿ ತೂಕದ ಬಂಡಿ ಎಳೆದು ಶಕ್ತಿ ಪ್ರದರ್ಶಿಸಿದ ಬಾಲಕರು - Boys pulling weighing above 650kg and shows their power
ನಾಗರ ಪಂಚಮಿ ಹಬ್ಬದ ಪ್ರಯುಕ್ತ ಶಕ್ತಿ ಪ್ರದರ್ಶನ ಕ್ರೀಡೆಯಲ್ಲಿ 650 ಕೆ.ಜಿ ಭಾರ ತುಂಬಿದ್ದ ಬಂಡಿಯನ್ನು 5 ಕಿಮೀ ವರೆಗೂ ಹೆಗಲ ಮೇಲೆ ಹೊತ್ತು ಸಾಗಿದರು. ಬಾಲಕರ ಈ ಸಾಹಸ ಕಂಡು ಜನ ನಿಬ್ಬೆರಗಾದರು.
ಬರೋಬ್ಬರಿ 650 ಕೆಜಿ ತೂಕದ ಬಂಡಿ ಎಳೆದು ಶಕ್ತಿ ಪ್ರದರ್ಶಿಸಿದ ಬಾಲಕರು
ಸತತ 3 ಗಂಟೆಗಳ ಕಾಲಾವಧಿಯಲ್ಲಿ ಜೋಡೆತ್ತುಗಳಂತೆ ಬಾಲಕರು ಬಂಡಿ ಎಳೆಯುವುದನ್ನು ನೋಡಿದ ಗ್ರಾಮಸ್ಥರು ಸಿಳ್ಳೆ, ಚಪ್ಪಾಳೆ ಮೂಲಕವಾಗಿ ಪ್ರೋತ್ಸಾಹಿಸುವ ಕಾರ್ಯಕ್ಕೆ ಮುಂದಾದರು.
ನಾಗರ ಪಂಚಮಿ ಹಬ್ಬದ ಪ್ರಯುಕ್ತ ಶಕ್ತಿ ಪ್ರದರ್ಶನ ಕ್ರೀಡೆಯಲ್ಲಿ ಭಾರ ತುಂಬಿದ್ದ ಬಂಡಿಯನ್ನು 5 ಕಿ.ಮೀ ವರೆಗೂ ಹೆಗಲ ಮೇಲೆ ಹೊತ್ತು ಸಾಗಿದರು. ಹಬ್ಬದ ನಿಮಿತ್ತವಾಗಿ ಪ್ರತಿ ವರ್ಷವೂ ದೇಶಿ ಕ್ರೀಡೆಗಳನ್ನು ಗ್ರಾಮದಲ್ಲಿ ಆಯೋಜಿಸಲಾಗುತ್ತಿದೆ.