ವಿಜಯಪುರ: ಬೈಕ್ ಹಾಗೂ ಟಿಪ್ಪರ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ.
ಟಿಪ್ಪರ್ ಡಿಕ್ಕಿ: ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು - ವಿಜಯಪುರದಲ್ಲಿ ರಸ್ತೆ ಅಪಘಾತ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು
ಇಂಡಿ ತಾಲೂಕಿನ ಹಿರೇರೂಗಿ ಕ್ರಾಸ್ ಬಳಿ ಭಾನುವಾರ ಸಂಜೆ ಬೈಕ್ ಹಾಗೂ ಟಿಪ್ಪರ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಬೈಕ್ ಸವಾರರಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಟಿಪ್ಪರ್-ಬೈಕ್ ಡಿಕ್ಕಿ
ಮೃತ ಸವಾರರನ್ನು ವಿಜಯಪುರದ ಕಾಲೇಬಾಗ್ ನಗರದ ವಾಸಿಗಳಾದ ಕಿರಣ ಕಟ್ಟಿಮನಿ (22), ರಾಜೂ ಗುನ್ನಾಪುರ (24) ಎಂದು ಗುರುತಿಸಲಾಗಿದೆ. ಇಂಡಿ ತಾಲೂಕಿನ ಹಿರೇರೂಗಿ ಕ್ರಾಸ್ ಬಳಿ ಭಾನುವಾರ ಸಂಜೆ, ಬೈಕ್ ಸವಾರರು ವೇಗವಾಗಿ ಚಲಾಯಿಸುತ್ತಿದ್ದಾಗ ಎದುರಿಗೆ ಬಂದ ಟಿಪ್ಪರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
TAGGED:
road accident at Vijayapura