ವಿಜಯಪುರ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಇಂಡಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಣಬಸಪ್ಪ ಹರಿಜನ ಹಾಗೂ ಬಾಬು ದೇವರಮನಿ ಬಂಧಿತ ಆರೋಪಿಗಳು. ಫೆ. 9ರಂದು ಈ ಘಟನೆ ನಡೆದಿದ್ದು, ಗ್ರಾಮ ಪಂಚಾಯತ್ ಚುನಾವಣೆ ವೇಳೆ ರಾಜಕೀಯ ದುರುದ್ದೇಶದಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿತ್ತು ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಫೆಬ್ರವರಿ 9ರಂದು ಅರ್ಜುಣಗಿ ಬಿ.ಕೆ.ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಗ್ರಾ.ಪಂ ಅಧ್ಯಕ್ಷ ಸ್ಥಾನ ಶಿವಮ್ಮ ಮಾದರ ಎಂಬುವರಿಗೆ ಮೀಸಲಾಗಿತ್ತು. ಶಿವಮ್ಮ ಅಧ್ಯಕ್ಷೆಯಾಗುತ್ತಾರೆ ಎಂಬುದರ ಬಗ್ಗೆ ಆರೋಪಿಗಳಿಬ್ಬರಿಗೆ ತೀವ್ರ ಅಸಮಾಧಾನವಿತ್ತು ಎನ್ನಲಾಗ್ತಿದೆ.
ಓದಿ:ವಾಟ್ಸಾಪ್ ಮೂಲಕ ಡ್ರಗ್ಸ್ ದಂಧೆ: ಅನಿಕಾ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್ಸಿಬಿ
ಹೀಗಾಗಿ, ಅಧ್ಯಕ್ಷ ಚುನಾವಣೆ ನಿಲ್ಲಿಸಬೇಕೆಂಬ ದುರುದ್ದೇಶದಿಂದ ಗ್ರಾಮದಲ್ಲಿರುವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದರು ಎಂದು ವಿಜಯಪುರ ಎಸ್ಪಿ ಅನುಪಮ್ ಅಗರ್ವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.