ಕರ್ನಾಟಕ

karnataka

ETV Bharat / state

ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ.. ದಕ್ಷಿಣ ಕಾಲುವೆಗೆ ನೀರು.. ರೈತರಲ್ಲಿ ನೂರ್ಮಡಿ ಹರುಷ.. - undefined

ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ದಕ್ಷಿಣ ಕಾಲುವೆಗೆ ನೀರು ಹರಿಸಲು ಆರಂಭಿಸಲಾಗಿದ್ದು, ಗುಲಾಲು ಎರಚಿ, ಗಂಗಾ ಪೂಜೆ ಮಾಡಿ ಜನ ಸಂತಸ ಪಟ್ಟರು.

ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ

By

Published : Jul 27, 2019, 7:42 AM IST

ವಿಜಯಪುರ: ಮಾಜಿ ಗೃಹ ಸಚಿವ ಎಂ ಬಿ ಪಾಟೀಲರ ಕನಸಿನ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ದಕ್ಷಿಣ ಕಾಲುವೆಗೆ ನೀರು ಹರಿಸಲು ಆರಂಭಿಸಲಾಗಿದೆ. ಗುಲಾಲು ಎರಚಿ, ಗಂಗಾ ಪೂಜೆ ಮಾಡಿ ಜನ ಸಂತಸಪಟ್ಟಿದ್ದಾರೆ.

ಕೃಷ್ಣಾನದಿಯ ನೀರು ಕವಟಗಿಯ ಹತ್ತಿರ ಲಿಫ್ಟ್ ಮೂಲಕ ನದಿಯಿಂದ 165 ಕಿ.ಮೀ ಎತ್ತರದ ತಿಕೋಟಾ ಪ್ರದೇಶಕ್ಕೆ ಮೇಲೆತ್ತಿ, ಅಲ್ಲಿಂದ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಹೀಗೆ 4 ಕಾಲುವೆಗಳ ಮೂಲಕ ಯತ್ನಾಳ, ಇಟ್ಟಂಗಿಹಾಳ, ಕನಮಡಿ, ಕಣಮುಚನಾಳ ಕಡೆ ಕಾಲುವೆಗಳನ್ನು ನಿರ್ಮಿಸಲಾಗಿದೆ. ಕಳೆದ ವಾರ ಯತ್ನಾಳ ಉತ್ತರ ಕಾಲುವೆಗೆ ನೀರು ಹರಿಸಲಾಗಿದ್ದು, ಇದೀಗ ದಕ್ಷಿಣ ಕಣಮುಚನಾಳ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಈ ಕಾಲುವೆ ತಿಕೋಟಾ-ಕಣಮುಚನಾಳ ಡೋಣಿವರೆಗೆ 19 ಕಿ ಮೀ ಉದ್ದವಿದೆ. ತಿಕೋಟಾ, ರತ್ನಾಪುರ, ತಾಜಪುರ, ಧನ್ಯಾಳ, ಕಣಮುಚನಾಳ ಗ್ರಾಮಗಳಿಗೆ ನೀರಾವರಿ ಸೌಕರ್ಯ ದೊರೆತು ಬಳಿಕ ಡೋಣಿ ನದಿ ಸೇರುವುದು.

ದಕ್ಷಿಣ ಕಾಲುವೆಗೆ ನೀರು ಹರಿಸಲು ಆರಂಭ

ನೀರಾವರಿ ಎನ್ನುವುದು ಗಗನ ಕುಸುಮವಾಗಿದ್ದ ಈ ಪ್ರದೇಶದಲ್ಲಿ ಬೋರ್‌ವೆಲ್‍ಗಳಿಗೆ ಆಶ್ರಿತವಾಗಿ ಅಲ್ಪನೀರಿನಲ್ಲಿಯೇ ದ್ರಾಕ್ಷಿ, ದಾಳಿಂಬೆಯಂತಹ ಬೆಳೆಗಳನ್ನು ರೈತರು ಬೆಳೆಯುತ್ತಿದ್ದರು. ಕಳೆದ ವರ್ಷವೇ ಇಲ್ಲಿ ಕಾಲುವೆ ನಿರ್ಮಿಸಲು ಆರಂಭಿಸಿದ್ದರು. ಇನ್ನೂ ಕಾಲುವೆ ಕೆಲಸವೇ ಮುಗಿದಿಲ್ಲ. ಅದಾಗಲೇ ನೀರು ಹರಿಸಿದ್ದು, ಬರಗಾಲದಿಂದ ಕಂಗೆಟ್ಟಿದ್ದ ನಮಗೆ ಇದರಿಂದ ಬಹಳ ಉಪಯೋಗವಾಗಿದೆ. ಕೇವಲ ಕಾಲುವೆಗೆ ನೀರು ಹರಿಸುವುದಲ್ಲದೇ, ಸುತ್ತಲಿನ ಕೆರೆ, ಬಾಂದಾರಗಳು, ಹಳ್ಳಗಳಿಗೂ ನೀರು ಹರಿಸಿದ್ದು, ಬೇಸಿಗೆಯಲ್ಲಿ ಈ ಬಾರಿ ನಮಗೆ ನೀರಿನ ತೊಂದರೆ ಆಗುವುದಿಲ್ಲ ಎನ್ನುವ ಭರವಸೆ ಇದೆ ಎಂದು ಈ ಭಾಗದ ರೈತರು ಸಂತೋಷಪಟ್ಟಿದ್ದಾರೆ.

ಈ ಭಾಗದ ರೈತ ಮುಖಂಡರಾದ ಕೃಷ್ಣಾ, ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಎಡವೆ, ಆರ್ ಜಿ ಯರನಾಳ, ಅನಿಲ ಹಿರೇಮಠ, ರಾಮಜಿ ಮಿಸಾಳ, ಗುರು ಮುಚ್ಚಂಡಿ, ಶ್ರೀಶೈಲ ಆಲಳ್ಳಿ, ಗೌಸ್‌ಪೀರ್ ಮೊಕಾಶಿ, ನಿಂಗನಗೌಡ ಬಿರಾದಾರ, ಮಹೇಶ ಪಾಟೀಲ್, ಪರಮಾನಂದ ಕಲಬೀಳಗಿ, ಅಶೋಕ ಸಾವಳಸಂಗ, ಉಮೇಶ ಯರನಾಳ, ಅಡಿವೆಪ್ಪ ಬಿರಾದಾರ ಹಾಗೂ ಮತ್ತಿತರರು ಸಂಭ್ರಮ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details