ವಿಜಯಪುರ:ಬೆಂಗಳೂರಿಗೆ ವರ್ಗಾವಣೆಗೊಂಡ ಎಸ್ಪಿ ಪ್ರಕಾಶ ನಿಕ್ಕಂ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಎಸ್ಪಿ ಅನುಪಮ್ ಅಗರವಾಲ್ಗೆ ಸ್ವಾಗತ ಕಾರ್ಯಕ್ರಮವನ್ನು ನಗರದ ಪೊಲೀಸ್ ಚಿಂತನ್ ಹಾಲ್‌ನಲ್ಲಿ ನಡೆಸಲಾಯಿತು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ವರ್ಗಾವಣೆಗೊಂಡ ಎಸ್ಪಿ ಪ್ರಕಾಶ ನಿಕ್ಕಂ ಅವರಿಗೆ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು. ಬಳಿಕ ಮಾತನಾಡಿದ ಎಸ್ಪಿ ಪ್ರಕಾಶ ನಿಕ್ಕಂ, ವಿಜಯಪುರ ಜಿಲ್ಲೆಯಲ್ಲಿ ನಾನು ಮಾಡಿದ ಸೇವೆ ಜೀವನದಲ್ಲಿ ಮರೆಯಲಾಗದು, ಜನರು ಕೂಡ ನಮ್ಮ ಇಲಾಖೆಗೆ ಸಾಥ್ ನೀಡಿದ್ದಾರೆ ಎಂದರು. ಇನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ನನಗೆ ಸಹೋದರನಂತೆ ಮಾರ್ಗದರ್ಶನ ನೀಡಿದ್ದಾರೆ. ಹೀಗಾಗಿ ಕಳೆದ ಲೋಕಸಭೆ, ವಿಧಾನಸಭೆ ಚುನಾವಣಾ ಕಾರ್ಯಗಳು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿದರು.
ಬೆಂಗಳೂರಿಗೆ ವರ್ಗಾವಣೆಗೊಂಡ ಎಸ್ಪಿ ಪ್ರಕಾಶ ನಿಕ್ಕಂಗೆ ಪೊಲೀಸ್ ಚಿಂತನ್ ಹಾಲ್‌ನಲ್ಲಿ ಬೀಳ್ಕೊಡುಗೆ ಸಮಾರಂಭ . ಬಳಿಕ ಮಾತನಾಡಿದ ನೂತನ ಎಸ್ಪಿ ಅನುಪಮ್ ಅಗರವಾಲ್, ಜಿಲ್ಲೆಗೆ ವರ್ಗಾವಣೆಯಾದ ಆದೇಶ ಬಂದಾಗ ಹಿರಿಯ ಅಧಿಕಾರಿಗಳ ಜೊತೆಗೆ ನಾನು ಮಾತನಾಡಿದಾಗ ಅವರು ವಿಜಯಪುರ ಜನರು ಹೃದಯವಂತರು ಹಿಂದೆ ಕೂಡ ಪ್ರಕಾಶ ನಿಕ್ಕಂ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ಅಧಿಕಾರಿಗಳಿಗೆ ಜನರಿಂದ ಯಾವುದೇ ದೂರು ಬಂದರೂ ವಿನಯಪೂರ್ವಕವಾಗಿ ಹಾಗೂ ಜನಸ್ನೇಹಿಯಾಗಿ ವರ್ತಿಸಬೇಕು ಎಂದು ಹೇಳಿದ್ದಾರೆ ಎಂದರು.
ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಪ್ರಕಾಶಂ ನಿಕ್ಕಂ ಅವರು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅನೇಕ ಸುಧಾರಣೆ ಕ್ರಮ ಕೈಗೊಂಡಿದ್ದಾರೆ. ಇನ್ನು ಅಧಿಕಾರಿಗಳು ಎರಡು ವರ್ಷಗಳ ಅವಧಿಯಲ್ಲಿ ವರ್ಗಾವಣೆ ಆಗುತ್ತಿದ್ದರೆ ಮಾತ್ರ ಜಿಲ್ಲೆಗೆ ಸುಧಾರಣೆ ತರಲು ಸಾಧ್ಯವಾಗುತ್ತೆ ಹಾಗೂ ಅಭಿವೃದ್ಧಿ ಕಾರ್ಯ ಮಾಡಲು ಸಹಕಾರ ಆಗುತ್ತದೆ ಎಂದು ಹೇಳಿದರು.
ಇನ್ನು ವರ್ಗಾವಣೆಗೊಂಡ ಎಸ್ಪಿ ಪ್ರಕಾಶ ನಿಕ್ಕಂ ಅವರನ್ನು ಪೊಲೀಸ್ ಇಲಾಖೆ ಸಿಬ್ಬಂದಿ ವಿಶೇಷ ಹೂವಿನಿಂದ ಅಲಂಕಾರಗೊಂಡ ವಾಹನಕ್ಕೆ ಹಗ್ಗ ಕಟ್ಟಿ ಎಳೆದು ಗೌರವದಿಂದ ಬೀಳ್ಕೊಡುಗೆ ನೀಡಿದರು.