ಕರ್ನಾಟಕ

karnataka

ETV Bharat / state

ಶವಸಂಸ್ಕಾರಕ್ಕೆ ಹೊರಟಿದ್ದ ಟ್ರ್ಯಾಕ್ಟರ್​​​ ಪಲ್ಟಿ: 15ಕ್ಕೂ ಹೆಚ್ಚು ಮಂದಿಗೆ ಗಾಯ - ಟ್ರಾಕ್ಟರ್​​ವೊಂದು ಪಲ್ಟಿಯಾಗಿ ಹಲವರಿಗೆ ಗಾಯ

ವಿಜಯಪುರದ ಗ್ರಾಮವೊಂದರಲ್ಲಿ ಶವಸಂಸ್ಕಾರಕ್ಕೆಂದು ಹೊರಟಿದ್ದ ಟ್ರಾಕ್ಟರ್​​ವೊಂದು ಪಲ್ಟಿಯಾಗಿ ಹಲವರಿಗೆ ಗಾಯಗಳಾಗಿವೆ.

ಟ್ರಾಕ್ಟರ್​​ ಪಲ್ಟಿ
ಟ್ರಾಕ್ಟರ್​​ ಪಲ್ಟಿ

By

Published : Jan 17, 2020, 4:26 PM IST

ವಿಜಯಪುರ:ಟ್ರ್ಯಾಕ್ಟರ್​ ಪಲ್ಟಿಯಾಗಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ, ಜಿಲ್ಲೆಯ ನಿಡಗುಂದಿ ತಾಲೂಕಿನ ಹೊಳೆಮಸೂತಿ ಗ್ರಾಮದ ಬಳಿ ನಡೆದಿದೆ.

ಯಲ್ಲಮ್ಮನ ಬೂದಿಹಾಳ ಗ್ರಾಮದಿಂದ ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ಶವಸಂಸ್ಕಾರಕ್ಕೆ ಹೊರಟಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಐದಕ್ಕಿಂತ ಹೆಚ್ಚು ಮಹಿಳೆಯರಿಗೆ ಸೊಂಟ ಮುರಿದಿದೆ ಹಾಗೂ ಪುರುಷರಲ್ಲಿ ಹಲವರು ಕಾಲು ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆ ಮತ್ತು ನಿಡಗುಂದಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶವಸಂಸ್ಕಾರಕ್ಕೆ ಹೊರಟಿದ್ದ ಟ್ರಾಕ್ಟರ್​​ ಪಲ್ಟಿಯಾಗಿರುವ ದೃಶ್ಯ

ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details