ಕರ್ನಾಟಕ

karnataka

ETV Bharat / state

ಗ್ರಾಪಂ ಅಧ್ಯಕ್ಷೆಯ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆಗೈದ ತಾಪಂ ಉಪಾಧ್ಯಕ್ಷ!? - ಗ್ರಾ.ಪಂಚಾಯತ್ ಅಧ್ಯಕ್ಷೆಯ ಮನೆಗೆ ನುಗ್ಗಿ, ತಾ.ಪಂಚಾಯತ್ ಉಪಾಧ್ಯಕ್ಷನಿಂದ ಹಲ್ಲೆ..?

ತಾಲೂಕು ಪಂಚಾಯತ್‌ ಉಪಾಧ್ಯಕ್ಷ ಹಾಗೂ ಆತನ ಬೆಂಬಲಿಗರ ಗುಂಪು ಗ್ರಾಮ ಪಂಚಾಯತ್ ಮಹಿಳಾ ಅಧ್ಯಕ್ಷರ ಮನೆಗೆ ನುಗ್ಗಿ ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

tp voice precident attack on gp president in vijayapur
ಬಸರಕೋಡ ಗ್ರಾಮದಲ್ಲಿ ನಡೆದ ಗಲಾಟೆ

By

Published : Dec 31, 2019, 5:25 PM IST

ವಿಜಯಪುರ: ತಾಲೂಕು ಪಂಚಾಯತ್‌ ಉಪಾಧ್ಯಕ್ಷ ಹಾಗೂ ಆತನ ಬೆಂಬಲಿಗರು ಮಹಿಳಾ ಗ್ರಾಮ ಪಂಚಾಯತ್ ಅಧ್ಯಕ್ಷರ ಮನೆಗೆ ನುಗ್ಗಿ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.ಬಸರಕೋಡ ಹಳ್ಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಸುನಂದಾ ಮಾದರ ಹಾಗೂ ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆದಿದೆ.

ಮುದ್ದೇಬಿಹಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ್ ಮತ್ತು ಸಹೋದರ ರವಿಗೌಡ ಪಾಟೀಲ್‌ ಗುಂಪು ಕಟ್ಟಿಕೊಂಡು ಹೋಗಿ ಸುನಂದಾರ ಮನೆ ಮುಂದೆ ಗಲಾಟೆ ಮಾಡಿದೆಯಂತೆ. ಅಷ್ಟೇ ಅಲ್ಲ, ಅವಾಚ್ಯ ಶಬ್ದಗಳಿಂದ ಸುನಂದಾರನ್ನ ನಿಂದಿಸಿ ಆವಾಜ್ ಹಾಕಿದ್ದಾರೆಂದು ಆರೋಪಿಸಲಾಗಿದೆ.

ಬಸರಕೋಡ ಗ್ರಾಮದಲ್ಲಿ ಗಲಾಟೆ..

ಎಂಟತ್ತು ಜನರೊಂದಿಗೆ ತೆರಳಿ, ಏಕಾಏಕಿ ಹಲ್ಲೆ ಮಾಡಿದ್ದು, ಮನೆಯಲ್ಲಿದ್ದ ಮಕ್ಕಳ‌ ಮೇಲೂ ದಬ್ಬಾಳಿಕೆ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಈ ಕುರಿತು ಯಾವುದೇ ದೂರನ್ನ ಪೊಲೀಸ್‌ ಠಾಣೆಯಲ್ಲಿ ದಾಖಲಿಸಲಾಗಿಲ್ಲ.

For All Latest Updates

TAGGED:

ABOUT THE AUTHOR

...view details