ಕರ್ನಾಟಕ

karnataka

ETV Bharat / state

ವಿಜಯಪುರ ಜಿಲ್ಲೆಯಲ್ಲಿಂದು 9 ಜನರಿಗೆ ಕೊರೊನಾ: ಸೋಂಕಿತರ ಸಂಖ್ಯೆ 202ಕ್ಕೆ ಏರಿಕೆ - ಕೊರೊನಾ ರಣಕೇಕೆ

ಜಿಲ್ಲೆಯಲ್ಲಿ ಮತ್ತೆ ಕೊರೊನಾ ರಣಕೇಕೆ ಹಾಕಿದ್ದು, ಇಂದು 9 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 202ಕ್ಕೆ ಏರಿದೆ.

today new nine corona case in vijayapura district
ವಿಜಯಪುರ ಜಿಲ್ಲೆಯಲ್ಲಿಂದು 9 ಜನರಿಗೆ ಕೊರೊನಾ, ಸೋಂಕಿತರ ಸಂಖ್ಯೆ 202ಕ್ಕೆ ಏರಿಕೆ

By

Published : Jun 7, 2020, 6:25 PM IST

ವಿಜಯಪುರ: ಜಿಲ್ಲೆಯಲ್ಲಿ ಇಂದು 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರನ್ನು ಜಿಲ್ಲಾಸ್ಪತ್ರೆಯ ಕೋವಿಡ್ ವಿಭಾಗಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಇಂದು ಒಬ್ಬ ಬಾಲಕ, ಇಬ್ಬರು ಬಾಲಕಿಯರು, ಓರ್ವ ಯುವಕ, ಇಬ್ಬರು ಪುರುಷರು, ಮೂವರು ಮಹಿಳೆಯರಿಗೆ ಸೋಂಕು ತಗುಲಿರುವದು ದೃಢಪಟ್ಟಿದೆ. ಸೋಂಕಿತರಲ್ಲಿ ಓರ್ವ ಬಾಲಕಿ ಹಾಗೂ ಓರ್ವ ಮಹಿಳೆಗೆ ರೋಗಿ ನಂ: 5013ರ ಮೂಲಕ ಸೋಂಕು ತಗುಲಿದೆ. ಉಳಿದ 7 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಸೋಂಕಿತರನ್ನು ಜಿಲ್ಲಾಸ್ಪತ್ರೆಯ ಕೋವಿಡ್ ವಿಭಾಗಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಇಲ್ಲಿವರೆಗೆ 68 ಜನ ಬಿಡುಗಡೆ:

ಸೋಂಕಿತರಲ್ಲಿ ಇಲ್ಲಿಯವರೆಗೆ 68 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇವರಲ್ಲಿ ಇಂದು ಬಿಡುಗಡೆಯಾದ ಇಬ್ಬರು ಸೇರಿದ್ದಾರೆ.

ABOUT THE AUTHOR

...view details