ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಬಿಗಿ ಬಂದೋಬಸ್ತ್ ನಿಯೋಜನೆ... - Vijayapura

ವಿಜಯಪುರ ನಗರದಲ್ಲಿ ಇಂದು ಯಾವುದೇ ಜನ ಸಂಚಾರವಿಲ್ಲದೆ ಪೊಲೀಸರಿಂದ ಬಿಗಿ ಬಂದೋಬಸ್ತ್ ನಿಯೋಜನೆ‌ ಮಾಡಲಾಗಿದೆ.

Vijayapura
ವಿಜಯಪುರ

By

Published : May 24, 2020, 12:06 PM IST

ವಿಜಯಪುರ: ರಾಜ್ಯ ಸರ್ಕಾರದ ಪ್ರತಿ ರವಿವಾರ ಲಾಕ್‌ಡೌನ್ ಘೋಷಣೆ ಬೆನ್ನಲ್ಲೆ ಇಂದು ನಗರದಲ್ಲಿ ಯಾವುದೇ ಜನ ಸಂಚಾರವಿಲ್ಲದೆ ಬಿಗಿ ಬಂದೋಬಸ್ತ್ ಕಾಯ್ದುಕೊಳ್ಳಲಾಗಿದೆ.

ತುರ್ತು ಕಾರ್ಯಗಳಿಗೆ ತೆರಳುವ ವಾಹನಗಳಿಗೆ ಮಾತ್ರ ಪೊಲೀಸರಿಂದ ಅನುಕೂಲ ಮಾಡಿಕೊಡಲಾಗುತ್ತಿದೆ. ಶನಿವಾರ ಸಂಜೆ 7 ಗಂಟೆಯಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಮೆಡಿಕಲ್, ಆಸ್ಪತ್ರೆ, ಹಾಲು, ಸೇರಿದಂತೆ ಅಗತ್ಯ ಸೇವೆಗಳಿಗೆ ಮಾತ್ರ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಯಾವುದೇ ಜನ ಸಂಚಾರವಿಲ್ಲದೆ ಪೊಲೀಸರಿಂದ ಬಿಗಿ ಬಂದೋಬಸ್ತ್ ನಿಯೋಜನೆ‌ ಮಾಡಲಾಗಿದೆ.

ಇನ್ನು ಗುಮ್ಮಟನಗರಿಯಲ್ಲಿ ಎಲ್ಲಾ ರಸ್ತೆಗಳು ಬಂದ್ ಆಗಿದ್ದು ಓಡಾಡುವ ವಾಹನಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅಗತ್ಯವಾಗಿ ಓಡಾಟ ನಡೆಸುವ ವಾಹನಗಳನ್ನು ಆರಕ್ಷಕ ಸಿಬ್ಬಂದಿ ಸೀಜ್ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಎಸ್ಪಿ ಅನುಪಮ್ ಅಗರವಾಲ್ ನೇತೃತ್ವದಲ್ಲಿ 300 ಜನ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ‌. ಇನ್ನು ಗಾಂಧಿ ಚೌಕ್, ಗೋಲ ಗುಮ್ಮಟ, ಕೇಂದ್ರ ಬಸ್ ನಿಲ್ದಾಣ, ಅಥಣಿ ರಸ್ತೆ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿದೆ.

ABOUT THE AUTHOR

...view details