ವಿಜಯಪುರ: ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿದ್ದ ಮೂರು ಲಕ್ಷ ಹಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಟೆಕ್ಕೆಯಲ್ಲಿ ನಡೆದಿದೆ. ನಗರದ ನಿವಾಸಿ ನಿತಿನ್ ಗವಾಯಿ ಕಾರು ನಿಲ್ಲಿಸಿ ಟೀ ಕುಡಿಯಲು ಹೋದಾಗ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಕಾರಿನ ಗಾಜು ಒಡೆದು ಮೂರು ಲಕ್ಷ ನಗದು ದೋಚಿದ ಖದೀಮರು - Three lakhs of rupees stolen from car window
ಕಾರು ನಿಲ್ಲಿಸಿ ಟೀ ಕುಡಿಯಲು ಹೋದಾಗ ಕಾರಿನ ಗಾಜು ಒಡೆದು ಮೂರು ಲಕ್ಷ ರೂ ನಗದು ಕಳ್ಳತನ ಮಾಡಿರುವ ಪ್ರಕರಣ ವಿಜಯಪುರ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
![ಕಾರಿನ ಗಾಜು ಒಡೆದು ಮೂರು ಲಕ್ಷ ನಗದು ದೋಚಿದ ಖದೀಮರು Three lakh rupees cash was stolen from the car in Vijayapura](https://etvbharatimages.akamaized.net/etvbharat/prod-images/768-512-14992032-thumbnail-3x2-bng.jpg)
ಕಾರಿನ ಗಾಜು ಒಡೆದು ಮೂರು ಲಕ್ಷ ರೂ ನಗದು ದೋಚಿದ ಖದೀಮರು
ಕಾರಿನಲ್ಲಿ ಹಣವಿಟ್ಟು ಅಂಗಡಿಗೆ ಹೋದಾಗ ಕಳ್ಳರು ಕಾರಿನ ಮುಂಭಾಗದ ಗ್ಲಾಸ್ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ. ವಿಜಯಪುರ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ:ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುಂಡರ ಜೀಪ್ ರೈಡಿಂಗ್ : ಪರಿಸರ ಪ್ರೇಮಿಗಳ ಆಕ್ರೋಶ