ವಿಜಯಪುರ:ಬೈಕ್ಗಳೆರಡು ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಬಳಿ ಸಂಭವಿಸಿದೆ.
ಬಬಲೇಶ್ವರದಲ್ಲಿ ಬೈಕ್ಗಳೆರಡು ಮುಖಾಮುಖಿ ಡಿಕ್ಕಿ; ಮೂವರು ದುರ್ಮರಣ - ವಿಜಯಪುರ ಅಪಘಾತ ಸುದ್ದಿ
ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂರು ಜನ ಸಾವನ್ನಪ್ಪಿರುವ ಘಟನೆ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಬಳಿ ನಡೆದಿದೆ.
ಬೈಕ್
ತೊದಲಬಾಗಿಯ ಲಕ್ಷ್ಮಣ ಮಾದರ ಹಾಗೂ ಅವರ ಪತ್ನಿ ಕಾಶಿಬಾಯಿ ಮಾದರ ಹಾಗೂ ಇನ್ನೊಂದು ಬೈಕ್ನ ಸವಾರ ಅನಿಲ ರಾಚಣ್ಣ ಮೇಳಗೇರಿ ಸಾವನ್ನಪ್ಪಿದ ದುರ್ದೈವಿಗಳು. ಇನ್ನು ಘಟನೆಯಲ್ಲಿ ಶಿವಪೂಜಯ್ಯ ಹಿರೇಮಠ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಇವರನ್ಮು ಬಾಗಲಕೋಟೆ ಜಿಲ್ಲೆಯ ಗಲಗಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Nov 4, 2020, 8:36 PM IST