ವಿಜಯಪುರ: ಕಾರು ಹಾಗೂ ಬೈಕ್ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಹೆದ್ದಾರಿ ಕ್ರಾಸ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ. ಮೃತರನ್ನು 20-25ವರ್ಷದೊಳಗಿನ ಅಕ್ಷಯ್, ಶುಭಂ ಹಾಗೂ ಬಾಗೇಶ ಎಂದು ಗುರುತಿಸಲಾಗಿದೆ.
ಕಾರು ಅತಿ ವೇಗದಿಂದ ಬರುತ್ತಿದ್ದು, ಚಾಲಕನ ನಿಯಂತ್ರಣದ ತಪ್ಪಿದೆ. ಅಲ್ಲದೇ ಚಾಲಕ ನಿರ್ಲಕ್ಷ್ಯ ತೋರಿದ್ದರಿಂದ ಎದುರಿಗೆ ಬರುತ್ತಿದ್ದ ಬೈಕ್ಗೆ ಮುಖಾಮುಖಿ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಮೃತ ಮೂವರು ಯುವಕರು ವಿಜಯಪುರ ಮೂಲದವರು ಎಂದು ಗುರುತಿಸಲಾಗಿದೆ.