ಕರ್ನಾಟಕ

karnataka

ETV Bharat / state

ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಮೂವರ ಬಂಧನ

ತಿಕೋಟಾ ತಾಲೂಕಿನ ತೊರವಿ ತಾಂಡಾ 1ರಲ್ಲಿ ನಡೆದ ಮಹಿಳೆಯ ಅತ್ಮಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ..

three-arrested-in-vijayapura-woman-suicide-case
ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಮೂವರ ಬಂಧನ

By

Published : Jun 17, 2022, 8:56 PM IST

ವಿಜಯಪುರ :ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಮೃತ ಮಹಿಳೆಯ ಪತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಪತಿ ಪಿಂಟೂ ಜಾಧವ್, ಮಾವ ಧರ್ಮು ಜಾಧವ್, ಮೈದುನ ವಿಠಲ್ ಜಾಧವ್ ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿಗಳು ಮಹಿಳೆಗೆ ಕಿರುಕುಳ ನೀಡಿದ್ದರು ಎನ್ನಲಾಗಿದೆ. ವಿಜಯಪುರ ‌ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ತಾಂಡಾ 1ರ ತೋಟದಲ್ಲಿ ಘಟನೆ ನಡೆದಿತ್ತು.

ಜೂನ್ 15ರ ಸಂಜೆ ತೋಟದಲ್ಲಿದ್ದ ಕೃಷಿ ಹೊಂಡದಲ್ಲಿ ಮಹಿಳೆ ಅನಿತಾ ಪಿಂಟು ಜಾಧವ್ (27), ಮಕ್ಕಳಾದ ಪ್ರವೀಣ (6), ಸುದೀಪ (4) ಹಾಗೂ ಮಮದಿಕಾ (2) ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಇದನ್ನೂ ಓದಿ:ಆಸ್ತಿ ವಿವಾದದ ಪ್ರಕರಣದಲ್ಲಿ ಸೋಲು : ಹೈಕೋರ್ಟ್‌ನಲ್ಲಿಯೇ ಚಾಕು ಬಳಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ABOUT THE AUTHOR

...view details