ಕರ್ನಾಟಕ

karnataka

ETV Bharat / state

ಪ್ರತ್ಯೇಕ ಪ್ರಕರಣ: ಗಾಂಜಾ ಬೆಳೆದಿದ್ದ ಮೂವರ ಬಂಧನ - ಗಾಂಜಾ ಬೆಳೆದಿದ್ದ ಮೂವರ ಬಂಧನ

ಇಂಡಿ ತಾಲೂಕಿನ ಲೋಣಿ ಕೆಡಿಯ ವಸ್ತಿ ನಿವಾಸಿ ಸಹೋದರರಾದ ಮಲ್ಲೇಶಿ ಅಮೋಘಸಿದ್ದ ಅಚ್ಚೆಗಾಂವಿ ಹಾಗೂ ಶಂಕರಲಿಂಗ ಅಚ್ಚೇಗಾಂವಿ ಬಂಧಿತ ಆರೋಪಿಗಳು.

ಗಾಂಜಾ ಬೆಳೆದ ವ್ಯಕ್ತಿಯ ಬಂಧನ
ಗಾಂಜಾ ಬೆಳೆದ ವ್ಯಕ್ತಿಯ ಬಂಧನ

By

Published : Mar 27, 2021, 1:08 AM IST

ವಿಜಯಪುರ: ಪ್ರತ್ಯೇಕ ಪ್ರಕರಣಗಳಲ್ಲಿ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಸಹೋದರರು ಸೇರಿ ಮೂವರನ್ನು ಬಂಧಿಸಿರುವ ಸಿಇಎನ್ ಅಪರಾಧ ವಿಭಾಗದ ಪೊಲೀಸರು, ಅವರಿಂದ ಗಾಂಜಾ ವಶಪಡಿಸಿಕೊಂಡಿದ್ದಾರೆ.‌

ಇಂಡಿ ತಾಲೂಕಿನ ಲೋಣಿ ಕೆಡಿಯ ವಸ್ತಿ ನಿವಾಸಿ ಸಹೋದರರಾದ ಮಲ್ಲೇಶಿ ಅಮೋಘಸಿದ್ದ ಅಚ್ಚೆಗಾಂವಿ ಹಾಗೂ ಶಂಕರಲಿಂಗ ಅಚ್ಚೇಗಾಂವಿ ಬಂಧಿತ ಆರೋಪಿಗಳು. ಇವರು ತಮ್ಮ ಜಮೀನಿನಲ್ಲಿ ಗಾಂಜಾ ಬೆಳೆದಿದ್ದು, ಬೆಲೆ 9.500 ರೂ.ಮೌಲ್ಯದ 950 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.

ಗಾಂಜಾ ಬೆಳೆದಿದ್ದ ಮೂವರ ಬಂಧನ

ಮತ್ತೊಂದು ಪ್ರಕರಣದಲ್ಲಿ ಜಿಲ್ಲೆಯ ತಾಳಿಕೋಟೆ ತಾಲೂಕಿನ ಶಿವಪುರ ಗ್ರಾಮದ ಭೀರಪ್ಪ ದೊಡ್ಡಪ್ಪ ಹೊಕ್ರಾಣಿ ತಮ್ಮ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ 900 ಗ್ರಾಂ ಹಸಿ ಗಾಂಜಾ ವಶಪಡಿಸಿಕೊಂಡು ವ್ಯಕ್ತಿಯ ಬಂಧನ ಮಾಡಿದ್ದಾರೆ.

ಈ ಎರಡು ಪ್ರಕರಣಗಳು ಪ್ರತ್ಯೇಕವಾಗಿ ದಾಖಲಾಗಿವೆ. ಅಕ್ರಮ ಗಾಂಜಾ ವಶಪಡಿಸಿಕೊಂಡಿರುವ ಪೊಲೀಸರ ತಂಡವನ್ನು ಎಸ್ಪಿ ಅನುಪಮ್ ಅಗರವಾಲ್ ಶ್ಲಾಘಿಸಿದ್ದಾರೆ.

ABOUT THE AUTHOR

...view details