ವಿಜಯಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್: ವಿಜಯಪುರದಲ್ಲಿ ಮೂವರ ಬಂಧನ - Vijayapura IPL cricket betting accused arrest news
ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿ, 3 ಲಕ್ಷ ರೂ. ನಗದು, 10 ಮೊಬೈಲ್ ಹಾಗೂ ಒಂದು ಟಿವಿಯನ್ನು ವಶ ಪಡಿಸಿಕೊಂಡಿದ್ದಾರೆ.
Arrest
ಇಂಡಿ ನಗರದ ನಿವಾಸಿಗಳಾದ ಶಿವಪುತ್ರ ಬಗಲಿ, ಚಂದ್ರಕಾಂತ ಪಾಟೀಲ ಹಾಗೂ ಸಾಯಬಣ್ಣ ಮೂರಮನ ಬಂಧಿತರು. ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಎಎಸ್ ಪಿ ಅರಸಿದ್ದಿ ನೇತೃತ್ವದ ತಂಡ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಬಂಧಿತರಿಂದ 3ಲಕ್ಷ ರೂ. ನಗದು, 10 ಮೊಬೈಲ್ ಹಾಗೂ ಒಂದು ಟಿವಿಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.