ವಿಜಯಪುರ: ಕಳೆದ ರಾತ್ರಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಕಳ್ಳತನ ನಡೆದಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.
ಬ್ರಹ್ಮಕುಮಾರಿ ವಿವಿ ಕಚೇರಿಯಲ್ಲಿ ಕಳ್ಳತನ: 1ಲಕ್ಷ ನಗದು, ಚಿನ್ನಾಭರಣ ಕಳವು - ಬ್ರಹ್ಮಕುಮಾರಿ ಕಚೇರಿಯಲ್ಲಿ ಕಳ್ಳತನ
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಕಳೆದ ರಾತ್ರಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಕಳ್ಳತನ ನಡೆದಿದೆ.
Thieves theft brahma kumari office at Vijayapura
ಯಾರೂ ಇಲ್ಲದ ಸಮಯದಲ್ಲಿ ಕಚೇರಿಯ ಬೀಗ ಮುರಿದ ಖದೀಮರು ಅಲ್ಲಿದ್ದ ಸುಮಾರು 1 ಲಕ್ಷದ 25 ಸಾವಿರ ನಗದು ಹಾಗೂ 10 ಗ್ರಾಂ ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.