ಕರ್ನಾಟಕ

karnataka

ETV Bharat / state

ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಕಳ್ಳರು.. ಕಳ್ಳಕವಟಗಿ ಗ್ರಾಮಸ್ಥರಿಂದ ಧರ್ಮದೇಟು! - villagers of Kallakavatagi

ಕಳ್ಳಕವಟಗಿ ಗ್ರಾಮದಲ್ಲಿ ಪ್ರಕಾಶ ಸಾವಂತ್ ಹಾಗೂ ಮಲ್ಲಿಕಾರ್ಜುನ ಸಲಗರ ಎಂಬುವರೇ ಸಿಕ್ಕಿಬಿದ್ದ ಬೈಕ್ ಕಳ್ಳರು. ಈ ಇಬ್ಬರು ಸೇರಿ ಬಸವರಾಜ ನಿಡೋಣಿ ಎಂಬುವರಿಗೆ ಸೇರಿದ ಬೈಕ್ ಕಳ್ಳತನ ಮಾಡಲು ಬಂದಿದ್ದರು.

ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಕಳ್ಳರು

By

Published : Aug 13, 2019, 2:28 PM IST

ವಿಜಯಪುರ: ಬೈಕ್ ಕಳ್ಳತನ ಮಾಡಲು ಯತ್ನಿಸಿ ಗ್ರಾಮಸ್ಥರಿಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳರಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ ಘಟನೆ ವಿಜಯಪುರ ತಾಲೂಕಿನ ತಿಕೋಟಾ ಹತ್ತಿರದ ಕಳ್ಳಕವಟಗಿ ಗ್ರಾಮದಲ್ಲಿ ನಡೆದಿದೆ.

ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಕಳ್ಳರು..

ಕಳ್ಳಕವಟಗಿ ಗ್ರಾಮದಲ್ಲಿ ಪ್ರಕಾಶ ಸಾವಂತ್ ಹಾಗೂ ಮಲ್ಲಿಕಾರ್ಜುನ ಸಲಗರ ಎಂಬುವರೇ ಸಿಕ್ಕಿಬಿದ್ದ ಬೈಕ್ ಕಳ್ಳರು. ಈ ಇಬ್ಬರು ಸೇರಿ ಬಸವರಾಜ ನಿಡೋಣಿ ಎಂಬುವರಿಗೆ ಸೇರಿದ ಬೈಕ್ ಕಳ್ಳತನ ಮಾಡಲು ಬಂದಿದ್ದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಿಕ್ಕಿಬಿದ್ದು ಧರ್ಮದ ಏಟು ತಿಂದಿದ್ದಾರೆ. ಅಲ್ಲದೇ, ಗ್ರಾಮದಲ್ಲಿ ಈ ಹಿಂದೆಯೂ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು‌. ರೈತರ ಪಂಪ್‌ಸೆಟ್, ಬೋರ್‌ವೆಲ್ ಕೇಬಲ್, ಅಂಗಡಿ, ಹೋಟೆಲ್, ಮನೆ, ಕುರಿ ಮತ್ತು ಕುರಿ ಮರಿ, ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟದ ದಾಸ್ತಾನು, ಬೈಕ್, ಸೈಕಲ್, ಟ್ರ್ಯಾಕ್ಟರ್​ನಲ್ಲಿನ ಟೇಪ್​ ರೆಕಾರ್ಡ್​, ವಾಹನಗಳ ಕಳ್ಳತನ ಮಾಡಿದ ಆರೋಪ ಹೊರಿಸಿ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ತದನಂತರ ಪೊಲೀಸರಿಗೆ ಕಳ್ಳರನ್ನು ಒಪ್ಪಿಸಿದ್ದಾರೆ. ಈ ಕುರಿತು ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details