ವಿಜಯಪುರ : ಸೆಕ್ಯುರಿಟಿ ಗಾರ್ಡ್ ಕೊಲೆಗೆ ಯತ್ನಿಸಿ ಮನೆಯಲ್ಲಿದ್ದ ಚಿನ್ನ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಮಹಾವೀರ ಕಾಲೋನಿಯಲ್ಲಿ ನಡೆದಿದೆ. ಗುಲಾಬ್ ಮಹಮ್ಮದ್ ಮುಜಾವರ್ ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿ.
ಶ್ರೀಕಾಂತ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಕುಟುಂಬಸ್ಥರು ಮದುವೆಗೆ ಹೋಗಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಗಾಯಾಳು ಸೆಕ್ಯುರಿಟಿ ಗಾರ್ಡ್‌ನನ್ನು ಚಿಕಿತ್ಸೆಗೆ ಎಂದು ಹತ್ತಿರದ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಹಣ ಕಳ್ಳತನ : ಬ್ಯಾಂಕ್ನಿಂದ ಡ್ರಾ ಮಾಡಿಕೊಂಡು ದ್ವಿಚಕ್ರವಾಹನದ ಮುಂಭಾಗದಲ್ಲಿ ಇಡಲಾಗಿದ್ದ ಎರಡೂವರೆ ಲಕ್ಷ ರೂ. ಹಣವನ್ನು ವ್ಯಕ್ತಿಯೊಬ್ಬ ಕದ್ದು ಪರಾರಿಯಾದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದಿದೆ. ವ್ಯಕ್ತಿಯು ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗುವ ದೃಶ್ಯ ಹತ್ತಿರದ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದ ಹೊಳೆಬಸು ಸಿದ್ರಾಮಪ್ಪ ಹೋಗೋಡಿ ಎಂಬಾತ ಹಣ ಕಳೆದುಕೊಂಡಿರುವ ವ್ಯಕ್ತಿ.
ಯೂನಿಯನ್ ಬ್ಯಾಂಕ್ನಿಂದ 2.5 ಲಕ್ಷ ರೂ. ಡ್ರಾ ಮಾಡಿಕೊಂಡು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಬಂದು ಬೈಕ್‌ನಲ್ಲಿ ಇಟ್ಟಿದ್ದರು. ಬಳಿಕ, ಸಿದ್ರಾಮಪ್ಪ ಮೊಬೈಲ್ ದುರಸ್ತಿಗಾಗಿ ಅಂಗಡಿಗೆ ತೆರಳಿದ್ದಾರೆ. ಸಿದ್ರಾಮಪ್ಪ ತೆರಳಿದ ತಕ್ಷಣವೇ ಬಂದ ಕಳ್ಳನೊಬ್ಬ ಬೈಕ್ನ ಮುಂಭಾಗದ ಬ್ಯಾಗ್ಗೆ ಕೈ ಹಾಕಿ ಒಮ್ಮೆ ಹಿಂದೆ ಮುಂದೆ ನೋಡಿ ಹಣದ ಸಮೇತ ಚೀಲ ತೆಗೆದುಕೊಂಡು ಹೋಗಿದ್ದಾನೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಇಜೇರಿ ಕಾಂಪ್ಲೆಕ್ಸ್ ಬಳಿ ಈ ಘಟನೆ ನಡೆದಿದೆ.