ಕರ್ನಾಟಕ

karnataka

ETV Bharat / state

ಸಿಬಿಐ ಅಧಿಕಾರಿ ಸೋಗಿನಲ್ಲಿ ಬಂದು ಚಿನ್ನಾಭರಣ ಎಗರಿಸಿದ ಖದೀಮ - ವಿಜಯಪುರ ಸುದ್ದಿ

ಸಿಂದಗಿ ಪಟ್ಟಣದಲ್ಲಿ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಬಂದ ಖದೀಮನೋರ್ವ ವ್ಯಕ್ತಿಯೊರ್ವನಿಗೆ ಹೀಗೆ ಬಂಗಾರ ಹಾಕಿಕೊಂಡ ತಿರುಗಾಡಬೇಡಿ ಎಂದು ಕರ್ಚಿಫ್​ ಕೊಟ್ಟು ಇದರಲ್ಲಿ ಹಾಕಿಕೊಳ್ಳಿ ಎಂದು ಮಂಕುಬೂದಿ ಎರಚಿ ನಾಪತ್ತೆಯಾಗಿದ್ದಾನೆ.

thief theft jeweled by saying himself as CBI officer
ವಿಜಯಪುರದಲ್ಲಿ ಕಳ್ಳತನ

By

Published : Nov 29, 2019, 1:47 PM IST

Updated : Nov 29, 2019, 5:00 PM IST

ವಿಜಯಪುರ:ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಬಂದ ಖದೀಮನೋರ್ವ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ವ್ಯಕ್ತಿಯ ಚಿನ್ನಾಭರಣ ಎಗರಿಸಿಕೊಂಡು ಹೋಗಿದ್ದಾನೆ.

ಸಿಂದಗಿ ಪಟ್ಟಣದ ಎಪಿಎಂಸಿ ವ್ಯಾಪಾರಸ್ಥ ಹಾಗೂ ಅರ್ಬನ್ ಬ್ಯಾಂಕ್ ನಿರ್ದೇಶಕ ಷಣ್ಮುಖ ಸಂಗಮ ಅವರ ಬಳಿಯಿದ್ದ ಸುಮಾರು 30.5ಗ್ರಾಂ ತೂಕದ ಬಂಗಾರವನ್ನು ಎಗರಿಸಿದ್ದಾರೆ. ವಿವೇಕಾನಂದ ಸರ್ಕಲ್ ಮಾರ್ಗದಿಂದ ಬೈಕ್ ಮೇಲೆ ಬಂದ ಖದೀಮ ತಾನು ಸಿಬಿಐ ಅಧಿಕಾರಿ ಎಂದು ಗುರುತಿನ ಕಾರ್ಡ್ ತೋರಿಸಿ ಲಾಕೆಟ್, ಎರಡು ಉಂಗುರ ಕರ್ಚಿಫ್ ನಲ್ಲಿ ಸುತ್ತಿಕೊಂಡು ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗಿದೆ.

ಎರಡು ದಿನ ಬಂಗಾರ ಹಾಕಿಕೊಳ್ಳಬೇಡಿ ಎಂದು ಒಂದು ಕರ್ಚಿಫ್ ನಲ್ಲಿ ಬಂಗಾರ ಹಾಕಿ ಕಣ್ತಪ್ಪಿಸಿ, ಮತ್ತೊಂದು ಕರ್ಚಿಫ್ ಕೊಟ್ಟು ಎಸ್ಕೇಪ್ ಆಗಿದ್ದಾನೆ. ಸುಮಾರು 1.23 ಲಕ್ಷ ರೂ ಮೌಲ್ಯದ ಆಭರಣಗಳನ್ನು ಕದ್ದೊಯ್ದಿದ್ದಾನೆ ಎಂದು ಎಂದು ತಿಳಿದುಬಂದಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Last Updated : Nov 29, 2019, 5:00 PM IST

ABOUT THE AUTHOR

...view details