ವಿಜಯಪುರ: ದೇಶದ ಸಂವಿಧಾನದ ಪ್ರಕಾರವೇ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಬಹುಮತದಿಂದ ಎನ್ಆರ್ಸಿ ಕಾಯ್ದೆ ಪಾಸ್ ಆಗಿದ್ದು, ಅದನ್ನು ಎಲ್ಲರೂ ಗೌರವಿಸಬೇಕು. ಜಾತ್ಯಾತೀತ ಹೆಸರಿನಲ್ಲಿ ಅಂಬೇಡ್ಕರ್ಗೆ ಹಾಗೂ ಭಾರತ ಸಂವಿಧಾನಕ್ಕೆ ಪ್ರತಿಪಕ್ಷದವರು ಅಗೌರವ ತೋರುತ್ತಿದ್ದಾರೆ. ಇಂತವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್ ಒತ್ತಾಯಿಸಿದ್ದಾರೆ.
ಸಂವಿಧಾನದ ನಿಯಮದಡಿಯೇ ಪೌರತ್ವ ಕಾಯ್ದೆ ತಿದ್ದುಪಡಿ ಆಗಿದೆ: ಯತ್ನಾಳ್ ಆಕ್ರೋಶ - ಬಸನಗೌಡ ಯತ್ನಾಳ್
ಸಂವಿಧಾನದ ನೀತಿ ನಿಯಮದ ಪ್ರಕಾರ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪೌರತ್ವ ಮಸೂದೆ ಕಾಯ್ದೆ ಅಂಗೀಕಾರಗೊಂಡಿದ್ದು, ಇದನ್ನು ಎಲ್ಲರೂ ಗೌರವಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತ ಒಂದು ಅನಾಥಾಶ್ರಮ ಎಂದು ಎಲ್ಲರೂ ತಿಳಿದಿದ್ದಾರೆ. ಮುಂದೆ ಒಂದು ದಿನ ಭಾರತ ಕೂಡ ಪಾಕಿಸ್ತಾನ ಸೇರಿದಂತೆ ತಡೆಯಲು ಕೇಂದ್ರ ನಾಯಕರು ಮುಂದಾಗಿದ್ದಾರೆ. ಇದು ಮತಾಂತರ ವಿರೋಧಿ ಕಾಯ್ದೆ ಹೊರತು ಮುಸ್ಲಿಂ ವಿರೋಧಿಯಲ್ಲ. ಈ ದೇಶದ ಬಗ್ಗೆ ಗೌರವ ಇದ್ದವರು ಈ ಕಾಯ್ದೆಯ ವಿರುದ್ಧವಾಗಿ ಹೋರಾಟ ಮಾಡುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ಟಾಂಗ್ ಕೊಟ್ಟಿದ್ದಾರೆ.
ಮಾಜಿ ಸಚಿವ ಯು ಟಿ ಖಾದರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅಂತವರು ವೋಟ್ ಬ್ಯಾಂಕ್‌ಗಾಗಿ ಈ ಕುತಂತ್ರ ಮಾಡಿ, ದೇಶವನ್ನ ಒಂದು ಜಾತಿ, ಧರ್ಮದ ದೇಶವನ್ನಾಗಿ ಮಾಡಲು ಹೊರಟಿದ್ದಾರೆ. ಪಾಕಿಸ್ತಾನದ ಇಮ್ರಾನ ಖಾನ್ ಕೂಡ ಇವರಿಗೆ ತಮ್ಮ ದೇಶಕ್ಕೆ ಪ್ರವೇಶವಿಲ್ಲ ಎಂದು ಹೇಳಿದ್ದಾರೆ. ಇವರು ಮೊದಲು ದೇಶದ ಸಂವಿಧಾನಕ್ಕೆ ಗೌರವ ಕೊಡುವ ಕೆಲಸ ಮಾಡಲಿ ಎಂದು ಯತ್ನಾಳ್ ಗುಡುಗಿದರು.