ಮುದ್ದೇಬಿಹಾಳ: ಮೂಡಬಿದರೆಯಿಂದ ವಿಜಯಪುರ ಜಿಲ್ಲೆಗೆ ವಾಪಸಾದ ಕಾರ್ಮಿಕರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ನಂತರ 19 ಕಾರ್ಮಿಕರನ್ನು ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಸತೀಶ ತಿವಾರಿ ತಿಳಿಸಿದ್ದಾರೆ.
ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಏಪ್ರಿಲ್ 20ರಂದು ಹೊರಡಿಸಿದ ಆದೇಶದಂತೆ, ಬೇರೆ ಜಿಲ್ಲೆಗೆ ಹೋಗಿದ್ದ ಕಾರ್ಮಿಕರನ್ನು ತವರು ಜಿಲ್ಲೆಗೆ ತೆರಳಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಹಾಗೂ ಬಸವನ ಬಾಗೇವಾಡಿ ತಾಲೂಕಿನ 19 ಕಾರ್ಮಿಕರನ್ನು ಮಂಗಳೂರು ಜಿಲ್ಲಾಡಳಿತ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿಗೆ ಬಸ್ ಮೂಲಕ ಕಳುಹಿಸಿಕೊಟ್ಟಿದೆ.
ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮೂಡಬಿದರೆಯ ಕಲ್ಲಿನ ಕ್ವಾರಿಯ ಕೆಲಸಕ್ಕೆ ಹೋಗಿದ್ದ ಮುದ್ದೇಬಿಹಾಳ ತಾಲೂಕಿನ ಕೊಣ್ಣೂರ, ಹಗರಗುಂಡ ಹಾಗೂ ಬ.ಬಾಗೇವಾಡಿಯ ಸೇರಿದಂತೆ 19 ಕಾರ್ಮಿಕರು ಬಸ್ ಮೂಲಕ ತಾಲೂಕಿಗೆ ವಾಪಸಾಗಿದ್ದಾರೆ.
ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಆರ್‌ಬಿಎಸ್‌ಕೆ ವೈದ್ಯ ಡಾ. ಪ್ರವೀಣ ಸುಣಕಲ್, ಸಿಬ್ಬಂದಿ ಎಂ.ಎಸ್.ಗೌಡರ, ಸುಲೇಮಾನ್ ರುದ್ರವಾಡಿ, ಎಸ್.ಆರ್.ಸಜ್ಜನ, ಆಶಾ ಕಾರ್ಯಕರ್ತೆಯರಾದ ಮೋದಿನಮಾ ಮುಲ್ಲಾ, ಶಿವಕಾಂತ ಮೇಟಿ ಇದ್ದರು.
ಇದೇ ಬಸ್ನಲ್ಲಿ ವಾಪಸ್ ಬಂದ ತಾಲೂಕಿನ ಹಗರಗುಂಡದ ಬಾಲಕ ವಿರೇಶ ಕುಂಬಾರ ರಕ್ತಹೀನತೆಯಿಂದ ಬಳಲುತ್ತಿದ್ದು, ತಾಳಿಕೋಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಗತ್ಯ ಮಾತ್ರಗಳನ್ನು ನೀಡಿ, ದೂರವಾಣಿ ಸಂಖ್ಯೆ ನೀಡಿ ಕಳುಹಿಸಿಕೊಡಲಾಗಿದೆ ಎಂದು ವೈದ್ಯಾಧಿಕಾರಿ ಡಾ. ತಿವಾರಿ ತಿಳಿಸಿದರು.