ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಶ್ಮಾನದಲ್ಲಿ ಜಾಗವೇ ಇಲ್ಲ - Increase of covid deaths

ಒಂದೇ ಸ್ಮಶಾನದಲ್ಲಿ ನಿತ್ಯ 10 ರಿಂದ 12 ಶವ ಸಂಸ್ಕಾರವನ್ನು ಜಿಲ್ಲಾಡಳಿತದ ಕೋವಿಡ್ ಶಿಷ್ಟಾಚಾರದಂತೆ ಮಾಡಲಾಗುಲಾಗುತ್ತಿದೆ. ಶವ ಸಂಸ್ಕಾರಕ್ಕೆ ಹೆಚ್ಚಿನ‌ ಸಂಖ್ಯೆಯಲ್ಲಿ ಶವಗಳು ಆಗಮಿಸುತ್ತಿರುವ ಹಿನ್ನೆಲೆ ಸ್ಮಶಾನವೂ ಪೂರ್ಣ ರಶ್ ಆಗಿದೆ. ಶವ ಪಡೆದುಕೊಂಡು ಅಂತ್ಯಸಂಸ್ಕಾರಕ್ಕೆ ಕ್ಯೂನಲ್ಲಿ ನಿಲ್ಲ ಬೇಕಾಗಿದೆ.

ಅಂತ್ಯಸಂಸ್ಕಾರ
ಅಂತ್ಯಸಂಸ್ಕಾರ

By

Published : May 1, 2021, 4:11 PM IST

Updated : May 1, 2021, 8:22 PM IST

ವಿಜಯಪುರ: ಕೊರೊನಾ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಮೃತರ ಅಂತ್ಯಕ್ರಿಯೆಗೆ ಸ್ಥಳವೇ ಸಿಗದೇ ಸಂಬಂಧಿಕರು ಪರದಾಡುವಂತಾಗಿದೆ.

ವಿಜಯಪುರದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಶ್ಮಾನದಲ್ಲಿ ಜಾಗವೇ ಇಲ್ಲ

ವಿಜಯಪುರ ನಗರದ ದೇವಗಿರಿ ಸ್ಮಶಾನದಲ್ಲಿ ನಿತ್ಯ ಹತ್ತಾರು ಶವಗಳ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ಇದರ ಲೆಕ್ಕಾಚಾರ ಸ್ವತಃ ಜಿಲ್ಲಾಡಳಿತಕ್ಕೂ ಲಭ್ಯವಾಗುತ್ತಿಲ್ಲ. ರಾಜ್ಯ ಆರೋಗ್ಯ‌ ಹೆಲ್ತ್ ಬುಲಟೆನ್ ನಲ್ಲಿ ಸಹ ನಿತ್ಯ 3 - 4 ಸಾವಿನ‌ ಲೆಕ್ಕ ತೋರಿಸಲಾಗುತ್ತದೆ. ಆದರೆ ಒಂದೇ ಸ್ಮಶಾನದಲ್ಲಿ ಪ್ರತಿ ನಿತ್ಯ 10 ರಿಂದ 12 ಶವ ಸಂಸ್ಕಾರವನ್ನು ಜಿಲ್ಲಾಡಳಿತದ ಕೋವಿಡ್ ಶಿಷ್ಟಾಚಾರದಂತೆ ಮಾಡಲಾಗುಲಾಗುತ್ತಿದೆ. ಶವ ಸಂಸ್ಕಾರಕ್ಕೆ ಹೆಚ್ಚಿನ‌ ಸಂಖ್ಯೆಯಲ್ಲಿ ಶವಗಳು ಆಗಮಿಸುತ್ತಿರುವ ಹಿನ್ನೆಲೆ ಸ್ಮಶಾನವೂ ಪೂರ್ಣ ರಶ್ ಆಗಿದೆ. ಶವ ಪಡೆದುಕೊಂಡು ಅಂತ್ಯಸಂಸ್ಕಾರಕ್ಕೆ ಕ್ಯೂನಲ್ಲಿ ನಿಲ್ಲಬೇಕಾಗಿದೆ.

ಒಂದು ತಿಂಗಳಿನಿಂದ ಉರಿಯುತ್ತಿರುವ ಬೆಂಕಿ ಇನ್ನೂ ನಂದಿದ ಉದಾಹರಣೆಯೇ ಇಲ್ಲವಾಗಿದೆ. ಒಂದೊಂದು ದಿವಸ ಸ್ಮಶಾನಕ್ಕೆ 10ಕ್ಕೂ ಅಧಿಕ ಶವಗಳು ಆಗಮಿಸುತ್ತಿವೆ. ಕೋವಿಡ್ ನಿಂದ ಸಾವು ಎಂದು ನಗರದ ವಿವಿಧ ಆಸ್ಪತ್ರೆಗಳಿಂದ ಬರ್ತಿರೋ ಶವಗಳು ಇವಾಗಿವೆ. ಈ ಮೊದಲು ದಿನಕ್ಕೆ 2 ರಿಂದ 3 ಶವ ಸಂಸ್ಕಾರ ನಡೆಯುತ್ತಿತ್ತು. ಕೊರೊನಾ 2ನೇ ಅಲೆ ಶುರುವಾದ ಮೇಲೆ ನಿತ್ಯ 10ಕ್ಕೂ ಅಧಿಕ ಶವ ಸಂಸ್ಕಾರ ಮಾಡಲಾಗುತ್ತಿದೆ.

Last Updated : May 1, 2021, 8:22 PM IST

ABOUT THE AUTHOR

...view details