ಕರ್ನಾಟಕ

karnataka

ETV Bharat / state

'ಸಿಎಂ ಬಿಎಸ್‌ವೈ ಕೆಳಗಿಳಿಸಲು ಇಬ್ಬರು ಕೇಂದ್ರ ಸಚಿವರಿಂದ ಷಡ್ಯಂತ್ರ..' - ಇತ್ತೀಚಿನ ವಿಜಯಪುರ ಸುದ್ದಿ

ಬಿಜೆಪಿ ಪಕ್ಷದೊಳಗಿನ ಸಮಸ್ಯೆ, ಪ್ರವಾಹಕ್ಕೆ ಸರ್ಕಾರ ಸ್ಪಂದಿಸಿದಿರುವುದು ಹಾಗೂ ಮುಖ್ಯಮಂತ್ರಿಗಳ ಸ್ಥಾನ ಗಟ್ಟಿಯಾಗಿಲ್ಲವೆಂದು ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಪಕ್ಷದೊಳಗೆ ಸಮಸ್ಯೆಯಿದೆ : ಬಸನಗೌಡ ಪಾಟಿಲ್​ ಯತ್ನಾಳ್​

By

Published : Oct 9, 2019, 3:48 PM IST

Updated : Oct 9, 2019, 5:29 PM IST

ವಿಜಯಪುರ:ಬಿಜೆಪಿ ಪಕ್ಷದೊಳಗಿನ ಸಮಸ್ಯೆ, ಪ್ರವಾಹಕ್ಕೆ ಸರ್ಕಾರ ಸ್ಪಂದಿಸಿದಿರುವುದು ಹಾಗೂ ಮುಖ್ಯಮಂತ್ರಿಗಳ ಸ್ಥಾನ ಗಟ್ಟಿಯಾಗಿಲ್ಲವೆಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

ಕರ್ನಾಟಕದ ಇಬ್ಬರು ಕೇಂದ್ರ ಸಚಿವರು ಯಡಿಯೂರಪ್ಪ ಅವರನ್ನು ಅಧಿಕಾರದಿಂದಿಳಿಸಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದರು. ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿ ಭೇಟಿಯಾಗಲು ಅವಕಾಶ ಕಲ್ಪಿಸಲಾಗುತ್ತಿದೆ.ಆದರೆ, ರಾಜ್ಯದ ಸಚಿವರಿಬ್ಬರ ಕುತಂತ್ರದಿಂದ ಯಡಿಯೂರಪ್ಪ ಅವರಿಗೆ ಪ್ರಧಾನಿ ಮೋದಿ ಭೇಟಿಗೆ ಅವಕಾಶ ನಿರಾಕರಿಸಲಾಗುತ್ತದೆ. ಬಿಎಸ್‌ವೈ ಬಗ್ಗೆ ನಿಮಗೆ ಅಸಮಾಧಾವಿದ್ದರೆ 76 ವಯಸ್ಸಾಗಿದೆ ಎಂದು‌ ರಾಜೀನಾಮೆ ಕೊಡಿಸಲಿ ಎಂದು ಅಸಮಾಧಾನ ಹೊರಹಾಕಿದರು.

ಬಸನಗೌಡ ಪಾಟೀಲ್​ ಯತ್ನಾಳ್ ಹೇಳ್ತಾರೆ,,ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ವಂತೆ,,​

ಅನಂತಕುಮಾರ, ಯಡಿಯೂರಪ್ಪ ಈ ಹಿಂದೆ ಜಗಳವಾಡುತ್ತಿದ್ದರು. ಆದರೆ, ಪಕ್ಷ, ಕರ್ನಾಟಕ, ದೇಶದ ಹಿತ ವಿಷಯ ಬಂದಾಗ ಒಗ್ಗೂಡುತ್ತಿದ್ದರು. ಆದರೆ, ಈಗ ರಾಜ್ಯದಲ್ಲಿ ನಡೆದಿರುವುದೇ ಬೇರೆ. ಶಿಸ್ತು ಉಲ್ಲಂಘಿಸದ ನಾನು ಶೋಕಾಸ್ ನೋಟಿಸ್​​ಗೆ ಉತ್ತರ ನೀಡುವುದಿಲ್ಲವೆಂದು ಕಿಡಿಕಾರಿದರು.

ಇನ್ನು, ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಅಮಿತ್​​ ಶಾ, ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ. ಪ್ರಧಾನಿ ಬಳಿ ರಾಜ್ಯದ ಜನರ ಭಾವನೆ ಹೇಳಿಕೊಳ್ಳಲು ನಾನೇನೂ ಹೆದರಲ್ಲ ಎಂದರು. ನಾನು ಪಕ್ಷದ ವಿರುದ್ಧ ಹೇಳಿಕೆ ನೀಡಿದ ಮೇಲೆ ಇಬ್ಬರು ಸಚಿವರು ದೆಹಲಿಗೆ ಹೋಗಿದ್ದರು. ಅವರು ಪರಿಹಾರ ತರದೇ ನನಗೆ ನೋಟಿಸ್​ ತರಲು ಹೋಗಿದ್ದರೆಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಕರ್ನಾಟಕದಿಂದ ಬಿಜೆಪಿಯಿಂದ ಕೇಂದ್ರ ಸಚಿವನಾದ ನಾಲ್ಕನೇ ವ್ಯಕ್ತಿ, ನನ್ನ ಶಕ್ತಿಯನ್ನು ವಿಧಾನ ಪರಿಷತ್​ನಲ್ಲಿ ತೋರಿಸಿದ್ದೇನೆ. ಅಲ್ಲದೇ ನಾನು ಬಿಜೆಪಿ ಸೇರುವಾಗ ಇವರೇನೂ ಸ್ವಾಗತಿಸಿಲ್ಲವೆಂದು ಕಿಡಿಕಾರಿದ್ದಾರೆ.

Last Updated : Oct 9, 2019, 5:29 PM IST

ABOUT THE AUTHOR

...view details