ವಿಜಯಪುರ:ಟ್ರ್ಯಾಕ್ಟರ್, ಟ್ರೇಲರ್ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಸಿಂದಗಿ ಪೊಲೀಸರು ಬಂಧಿಸಿದ್ದು, ಅವರಿಂದ 14.93 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯಪುರ: ಟ್ರ್ಯಾಕ್ಟರ್, ಟ್ರೇಲರ್ ಕಳ್ಳರ ಬಂಧನ - ವಿಜಯಪುರ ಸುದ್ದಿ
ನಗರದಲ್ಲಿ ಟ್ರ್ಯಾಕ್ಟರ್, ಟ್ರೇಲರ್ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಸಿಂದಗಿ ಪೊಲೀಸರು ಬಂಧಿಸಿದ್ದಾರೆ.
Tractor
ಬಂಧಿತರನ್ನು ಹುಸೇನ ನದಾಫ್, ಸಮೀರ ನದಾಫ್, ರವಿಕುಮಾರ ಮಾದರ ಹಾಗೂ ಫೈಗಂಬರ ನದಾಫ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ 14.93 ಲಕ್ಷ ರೂ. ಮೌಲ್ಯದ 8 ಟ್ರೇಲರ್, ಒಂದು ಬೈಕ್ ಹಾಗೂ ಒಂದು ಟ್ರ್ಯಾಕರ್ ವಶಪಡಿಸಿಕೊಳ್ಳಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.