ವಿಜಯಪುರ: ಊರಿಗೆ ಹೋಗಲು ಹಣವಿಲ್ಲವೆಂದು ನೊಂದ ಮಹಿಳೆಯೊಬ್ಬರು ನಗರ ಶಾಸಕರ ಕಾಲಿಗೆ ಬಿದ್ದ ಘಟನೆ ಕೇಂದ್ರ ಬಸ್ ನಿಲ್ದಾಣ ಬಳಿ ನಡೆದಿದೆ.
ಊರಿಗೆ ಹೋಗಲು ಹಣವಿಲ್ಲವೆಂದು ಶಾಸಕರ ಕಾಲಿಗೆ ಬಿದ್ದ ಮಹಿಳೆ,, ಮುಂದೇನಾಯ್ತು? - woman fell down the MLA Basavana Gowda Patil Yatnal feet
ಊರಿಗೆ ಹೋಗಲು ಹಣವಿಲ್ಲವೆಂದು ನೊಂದ ಮಹಿಳೆಯೊಬ್ಬರು ನಗರ ಶಾಸಕರ ಕಾಲಿಗೆ ಬಿದ್ದ ಘಟನೆ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಬಳಿ ನಡೆದಿದೆ.
ಶಾಸಕರ ಕಾಲಿಗೆ ಬಿದ್ದ ಮಹಿಳೆ
ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಗರ ಪ್ರದಕ್ಷಿಣೆ ನಡೆಸುತ್ತಿದ್ದ ವೇಳೆ ಮುದ್ದೇಬಿಹಾಳ ನಿವಾಸಿ ಶಾರದಾ ಚೌಹಾಣ್ ಎಂಬ ಮಹಿಳೆ ಬಸ್ ಟಿಕೆಟ್ಗೆ ನನ್ನ ಬಳಿ ಹಣವಿಲ್ಲ ಎಂದು ಶಾಸಕರ ಕಾಲಿಗೆ ಬಿದ್ದು ಬೇಡಿಕೊಂಡರು. ಬಸ್ಗೆ ಹೋಗಲು ಹಣ ನೀಡಿ ಎಂದು ಮನವಿ ಮಾಡಿಕೊಂಡರು.ನಂತರ ಮಹಿಳೆಯ ಮನವಿಗೆ ಸ್ಪಂದಿಸಿ ಹಣ ನೀಡಿ, ನಂತರ ಯತ್ನಾಳ್ ಬೆಂಬಲಿಗರು ಆಕೆಯನ್ನು ಬಸ್ವರೆಗೆ ಬಿಟ್ಟು ಬಂದು ಮಾನವೀಯತೆ ಮೆರೆದರು.