ವಿಜಯಪುರ:ಕಳೆದ ಹಲವು ತಿಂಗಳಿನಿಂದ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಕೊಲೆ, ಕೊಲೆ ಯತ್ನ, ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ನಗರದ ಜಗದಾಳೆ ಹಾಗೂ ಸೇನಾನಗರದಲ್ಲಿ ನಡೆದ ಎರಡು ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು ಗಾಂಧೀ ನಗರದ ಆರೋಪಿ ರೋಹಿತ ಕಾಯಗೊಂಡನನ್ನು ಬಂಧಿಸಿ ಆತನಿಂದ 10 ತೊಲ ಬಂಗಾರ, 27 ತೊಲ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 4.96 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಗವಿಸಿದ್ಧನಮಡ್ಡಿ ನಿವಾಸಿ ಅಸ್ಲಂ ಸಣದಿ ಎಂಬ ಆರೋಪಿಯನ್ನು ಬಂಧಿಸಿ 4 ಮನೆಗಳ್ಳತನ ಪ್ರಕರಣ ಭೇದಿಸಿದ್ದಾರೆ. ಆತನಿಂದ 10 ತೊಲ ಬಂಗಾರ ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 4.80 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಇಬ್ಬರು ಆರೋಪಿಗಳಿಂದ 9.76 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.