ಕರ್ನಾಟಕ

karnataka

ETV Bharat / state

ನಾಲತವಾಡ ನೀರು ಶುದ್ಧಿಗೆ ತಮಿಳುನಾಡಿನ ಮರಳು ಬಳಕೆ - ಶುದ್ಧೀಕರಣ ಘಟಕ

ಮುದ್ದೇಬಿಹಾಳ ಶಾಸಕ ಎ‌.ಎಸ್. ಪಾಟೀಲ ನಡಹಳ್ಳಿ ಅವರ ಸೂಚನೆ ಮೇರೆಗೆ ನಾಲತವಾಡ ಪಟ್ಟಣ ಪಂಚಾಯತ್​ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಧಿಕಾರಿಗಳು ಟೆಂಡರ್ ಮೂಲಕ ಗುತ್ತಿಗೆ ನೀಡಿ ತಮಿಳುನಾಡಿನಿಂದ ವಿಶೇಷ ಮರಳು ಹಾಗೂ ಬಳ್ಳಾರಿಯ ಮೂರು ತರಹದ ಜಲ್ಲಿಕಲ್ಲನ್ನು ಶುದ್ಧೀಕರಣಕ್ಕೆ ಆಮದು ಮಾಡಿಕೊಳ್ಳಲಾಗಿದೆ.

Muddebihal
ನಾಲತವಾಡ ನೀರು ಶುದ್ಧಿಗೆ ತಮಿಳುನಾಡಿನ ಮರಳು ಬಳಕೆ

By

Published : Sep 24, 2020, 12:41 PM IST

ಮುದ್ದೇಬಿಹಾಳ: ಕೊರೊನಾ ವೈರಸ್ ಹಾಗೂ ಸಾಂಕ್ರಾಮಿಕ ರೋಗ ತಡೆಗಟ್ಟಲು ಶುದ್ಧೀಕರಣ ಘಟಕದಲ್ಲಿ ತಮಿಳುನಾಡು ಮರಳು ಹಾಗೂ ಬಳ್ಳಾರಿ ಜಲ್ಲಿಕಲ್ಲು ಉಪಯೋಗಿಸಿ ನೀರು ಶುದ್ಧೀಕರಣಕ್ಕೆ ನಾಲತವಾಡ ಪಟ್ಟಣ ಪಂಚಾಯತ್​ ಅಧಿಕಾರಿಗಳು ಮುಂದಾಗಿದ್ದಾರೆ.

ನಾಲತವಾಡ ನೀರು ಶುದ್ಧಿಗೆ ತಮಿಳುನಾಡಿನ ಮರಳು ಬಳಕೆ..

ಮುದ್ದೇಬಿಹಾಳ ಶಾಸಕ ಎ‌.ಎಸ್. ಪಾಟೀಲ ನಡಹಳ್ಳಿ ಅವರ ಸೂಚನೆ ಮೇರೆಗೆ ನಾಲತವಾಡ ಪಟ್ಟಣದ ಪಂಚಾಯತ್​ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಧಿಕಾರಿಗಳು ಟೆಂಡರ್ ಮೂಲಕ ಗುತ್ತಿಗೆ ನೀಡಿ ತಮಿಳುನಾಡಿನಿಂದ ವಿಶೇಷ ಮರಳು ಹಾಗೂ ಬಳ್ಳಾರಿಯ ಮೂರು ತರಹದ ಜಲ್ಲಿಕಲ್ಲನ್ನು ಶುದ್ಧೀಕರಣಕ್ಕೆ ತರಿಸಿಕೊಳ್ಳಲಾಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ನಾಲತವಾಡ ಪಟ್ಟಣದ ಪಂಚಾಯತ್​ ಮುಖ್ಯಾಧಿಕಾರಿ ಎಂ.ಆರ್. ದಾಯಿ ಈ ಘಟಕದಲ್ಲಿ ನೀರು ಶುದ್ಧೀಕರಿಸುವುದರಿಂದ ಜನತೆಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಅದಕ್ಕಾಗಿ ಮೂರು ವಿಭಿನ್ನ ತರಹದ 800 ಚೀಲಗಳ ಮರಳನ್ನು ತಮಿಳುನಾಡಿನಿಂದ ಆಮದು ಮಾಡಿಕೊಂಡಿದ್ದು, ಶುದ್ಧೀಕರಣ ಘಟಕದಲ್ಲಿ ಬಳಸಲಾಗುತ್ತಿದೆ ಎಂದರು.

ಈ ವೇಳೆ ಕಿರಿಯ ಅಧಿಕಾರಿ ಚಂದ್ರಶೇಖರ ಸಾಗರ್, ಕಿರಿಯ ಆರೋಗ್ಯ ನಿರೀಕ್ಷಕ ಪ್ರಸನ್ನ ಅವಟಿ, ವಿರೇಶ ದೊಡಮನಿ, ಎಂಜಿನಿಯರ್ ವಿರೇಶ ತಂಗಡಗಿ ಉಪಸ್ಥಿತರಿದ್ದರು.

ABOUT THE AUTHOR

...view details