ಕರ್ನಾಟಕ

karnataka

ETV Bharat / state

ಮದುವೆಯಾದ ಎರಡೇ ತಿಂಗಳಿಗೆ 5 ವರ್ಷದ ಬಾಲಕನನ್ನು ಕೊಂದ ಮಲತಾಯಿ - ವಿಜಯಪುರದಲ್ಲಿ ಮಲತಾಯಿಂದ ಮಗನ ಕೊಲೆ

ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಎರಡು ತಿಂಗಳ ಹಿಂದೆ ಮದುವೆಯಾಗಿ ಬಂದಿದ್ದ ಮಲತಾಯಿಯೊಬ್ಬಳು 5 ವರ್ಷದ ಬಾಲಕನನ್ನು ಕೊಲೆ ಮಾಡಿದ್ದಾಳೆ.

5 ವರ್ಷದ ಬಾಲಕನನ್ನು ಕೊಂದ ಮಲತಾಯಿ
5 ವರ್ಷದ ಬಾಲಕನನ್ನು ಕೊಂದ ಮಲತಾಯಿ

By

Published : Dec 10, 2021, 4:10 PM IST

Updated : Dec 10, 2021, 4:27 PM IST

ವಿಜಯಪುರ:ತನ್ನ ಪತಿಯ ಮೊದಲ ಹೆಂಡತಿ ಇಬ್ಬರು ಮಕ್ಕಳ ಹತ್ಯೆಗೆ ಮಲತಾಯಿ ಯತ್ನಿಸಿರುವ ಘಟನೆ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಮಗ ಸಾವನ್ನಪ್ಪಿದರೆ, ಇನ್ನೊಬ್ಬ ಬದುಕಿಳಿದಿದ್ದು, ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಲತಾಯಿ ಸವಿತಾ ವಿನೋದ್ ಚವ್ಹಾಣ್​ ಎಂಬವಳಿಂದ ಈ ಕೃತ್ಯ ನಡೆದಿದೆ.‌ ಐದು ವರ್ಷದ ಬಾಲಕ ಮೃತ‌ನಾಗಿದ್ದರೆ.‌ ಮೂರುವರೇ ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದ್ದು, ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.‌

ವಾಹನ ಚಾಲಕನಾಗಿ ವೃತ್ತಿ ಮಾಡುತ್ತಿದ್ದ ವಿನೋದನ ಮೊದಲ ಪತ್ನಿ ಶಾರೂಬಾಯಿಗೆ ಇಬ್ಬರು ಗಂಡು ಮಕ್ಕಳು. ಮೊದಲ ಪತ್ನಿ ಶಾರೂಬಾಯಿ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಕ್ಕಳು ಅನಾಥರಾಗಬಾರದೆಂದು ವಿನೋದ್​​ ಸವಿತಾಳನ್ನ ಎರಡು ತಿಂಗಳ ಹಿಂದೆ ಎರಡನೇ ಮದುವೆಯಾಗಿದ್ದ.

ಇಂದು ಸವಿತಾ ಮೊಬೈಲ್ ಚಾರ್ಜರ್​​​ನಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಳು. ಅದರಂತೆ ಇಂದು ಈ ಕೃತ್ಯ ಎಸಗಿದ್ದಾಳೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ, ವಿಚಾರಣೆ ನಡೆಸಿ ಸವಿತಾಳನ್ನ ವಶಕ್ಕೆ ಪಡೆದಿದ್ದಾರೆ.

Last Updated : Dec 10, 2021, 4:27 PM IST

ABOUT THE AUTHOR

...view details