ಕರ್ನಾಟಕ

karnataka

ETV Bharat / state

ಹಸುಗೂಸು ಬಿಟ್ಟು ಪರೀಕ್ಷೆ ಬರೆದ ಬಾಣಂತಿ..!! - ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022

ಬಾಹ್ಯ ಪರೀಕ್ಷಾರ್ಥಿಯೊಬ್ಬರು ತಮ್ಮ ನಾಲ್ಕು ತಿಂಗಳ ಮಗುವಿನೊಂದಿಗೆ ಬಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ವೇಳೆ ಆಶಾ ಕಾರ್ಯಕರ್ತೆ ಮಗುವಿನ ಆರೈಕೆ ಮಾಡಿದ್ದಾರೆ.

The small child left and write the sslc exam in Muddebihal vijayapura district
ಹಸುಗೂಸು ಬಿಟ್ಟು ಪರೀಕ್ಷೆ ಬರೆದ ಬಾಣಂತಿ

By

Published : Mar 28, 2022, 2:13 PM IST

Updated : Mar 28, 2022, 4:54 PM IST

ಮುದ್ದೇಬಿಹಾಳ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಾಣಂತಿ ಯೊಬ್ಬರು ತಮ್ಮ ನಾಲ್ಕು ತಿಂಗಳ ಹಸು ಗೂಸಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ಘಟನೆ ಮುದ್ದೇಬಿಹಾಳದಲ್ಲಿ ನಡೆದಿದೆ.

ಹಸುಗೂಸು ಬಿಟ್ಟು ಪರೀಕ್ಷೆ ಬರೆದ ಬಾಣಂತಿ..!!
ಪರೀಕ್ಷಾರ್ಥಿ ಮಹಿಳೆ ಪರೀಕ್ಷಾ ಕೇಂದ್ರದ ಹೊರಗಡೆ ಆಶಾ ಕಾರ್ಯಕರ್ತೆ ಬಳಿ ಮಗುವನ್ನು ಬಿಟ್ಟು ಪರೀಕ್ಷೆಗೆ ಹಾಜರಾಗಿದ್ದರು. ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಪರೀಕ್ಷಾ ಕೇಂದ್ರದಲ್ಲಿ ಈ ದೃಶ್ಯ ಕಂಡು ಬಂದಿದ್ದು, ತಸ್ಲೀಮಾ ಮಕಾನದಾರ್ ತಮ್ಮ ನಾಲ್ಕು ತಿಂಗಳ ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ.

ಬಾಹ್ಯ ಪರೀಕ್ಷಾರ್ಥಿಯಾಗಿ ತಸ್ಲೀಮಾ ಮಕಾನದಾರ್ ಪರೀಕ್ಷೆ ತೆಗೆದುಕೊಂಡಿದ್ದರೆ ಆಶಾ ಕಾರ್ಯಕರ್ತೆ ಉಮಾ ಶಾರದಹಳ್ಳಿ ಇವರ ಮಗುವಿನ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ:ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಬಳಿ ಹೆಜ್ಜೇನು ದಾಳಿ ; ಐವರು ವಿದ್ಯಾರ್ಥಿಗಳಿಗೆ ಗಾಯ

Last Updated : Mar 28, 2022, 4:54 PM IST

ABOUT THE AUTHOR

...view details