ಕರ್ನಾಟಕ

karnataka

ETV Bharat / state

ಉಚಿತವಾಗಿ ಮಾಸ್ಕ್ ವಿತರಣೆ ಮೂಲಕ ಸಾರ್ವಜನಿಕ ವಾಚನಾಲಯ ಪುನರಾರಂಭ - ಓದುಗರಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ

ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ್ ಕಛೇರಿ ಪಕ್ಕದಲ್ಲಿರುವ ಸಾರ್ವಜನಿಕ ವಾಚನಾಲಯದಲ್ಲಿ ಓದುಗರಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸುವ ಮೂಲಕ ವಾಚನಾಲಯವನ್ನು ಪುನರಾರಂಭಿಸಲಾಯಿತು.

Muddebihala
ಸಾರ್ವಜನಿಕ ವಾಚನಾಲಯದ ಪುನರಾರಂಭ

By

Published : Jun 10, 2020, 10:05 AM IST

ಮುದ್ದೇಬಿಹಾಳ: ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ವೇಳೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚನೆಯ ಮೇರೆಗೆ ಬಂದ್ ಮಾಡಲಾಗಿದ್ದ ಸಾರ್ವಜನಿಕ ವಾಚನಾಲಯವನ್ನು ಮಂಗಳವಾರದಿಂದ ಮತ್ತೆ ಆರಂಭಿಸಲಾಗಿದೆ.

ಪಟ್ಟಣದ ಹಳೇ ತಹಶೀಲ್ದಾರ್ ಕಛೇರಿ ಪಕ್ಕದಲ್ಲಿರುವ ಸಾರ್ವಜನಿಕ ವಾಚನಾಲಯದಲ್ಲಿ ಓದುಗರಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸುವ ಮೂಲಕ ವಾಚನಾಲಯವನ್ನು ಪ್ರಾರಂಭ ಮಾಡಲಾಯಿತು.

ಓದುಗರಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ಸಾರ್ವಜನಿಕ ವಾಚನಾಲಯವನ್ನು ಪುನರಾರಂಭಿಸಲಾಯಿತು.

ಸಾರ್ವಜನಿಕ ವಾಚನಾಲಯದ ಅಧ್ಯಕ್ಷ ಬಾಬು ಬಿರಾದಾರ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ಸಾರ್ವಜನಿಕ ವಾಚನಾಲಯ ಓದುಗರಿಗೆ ಮುಕ್ತಗೊಳಿಸಲಾಗಿದೆ. ಎಂದಿನಂತೆ ದಿನಪತ್ರಿಕೆ, ವಾರಪತ್ರಿಕೆಗಳು ಪುಸ್ತಕಗಳನ್ನು ಸಾಮಾಜಿಕ ಅಂತರವನ್ನು ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಂಡು ಬರಬೇಕು ಎಂದು ಹೇಳಿದರು.

ಹಿರಿಯ ನ್ಯಾಯವಾದಿ ಆರ್.ಬಿ.ಪಾಟೀಲ್, ಎಂ.ಹೆಚ್. ಹಾಲಣ್ಣವರ, ಬಿ.ಜಿ.ಜಗ್ಗಲ್, ರುದ್ರಗೌಡ್ರ ಪಾಟೀಲ, ರಫೀಕ್ ಮುದ್ನಾಳ್, ಬಿ.ಬಿ.ಕಟ್ಟಿ, ಗ್ರಂಥಾಲಯ ಸಹಾಯಕ ಮಹಾಂತೇಶ ಬಿಜ್ಜೂರ ಉಪಸ್ಥಿತರಿದ್ದರು.

ABOUT THE AUTHOR

...view details