ವಿಜಯಪುರ: ಜಿಲ್ಲೆಯ ಕೊಳಚೆ ಪದೇಶಗಳಲ್ಲಿ ವಾಸಿಸುವ ಜನರಿಗೆ ಜಿಲ್ಲಾಡಳಿತ ಸೂರು ನಿರ್ಮಾಣಕ್ಕೆ ಜಾಗ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ದಲಿತ ಸಮರ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿದರು.
ವಿಜಯಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕೊಳೆಗೇರಿ ಜನರ ಮನವಿ - ನಿರ್ಮಾಣಕ್ಕೆ ಜಾಗ ಹಾಗೂ ಮೂಲ ಸೌಕರ್ಯ
ಕೊಳಚೆ ಪದೇಶಗಳಲ್ಲಿ ವಾಸಿಸುವ ಜನರಿಗೆ ವಿಜಯಪುರ ಜಿಲ್ಲಾಡಳಿತ ಸೂರು ನಿರ್ಮಾಣಕ್ಕೆ ಜಾಗ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ದಲಿತ ಸಮರ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿದರು.
ಕೊಳೆಚೆ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಸತಿ ನಿರ್ಮಿಸಿಕೊಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಕೇವಲ ಭರವಸೆ ಮಾತುಗಳನ್ನೇ ಹೇಳುತ್ತಿದ್ದಾರೆಯೇ ಹೊರತು ಕಾರ್ಯ ರೂಪಕ್ಕೆ ತರಲು ಮುಂದಾಗಿಲ್ಲ. ಜಿಲ್ಲೆಯ ನಿಡಗುಂದಿ ಪಟ್ಟದಲ್ಲಿ ಸುಡುಗಾಡು ಸಿದ್ದರು 15 ವರ್ಷಗಳಿಂದ ನಾಗರೀಕ ಸೌಲಭ್ಯಗಳಿಲ್ಲದೆ ರಸ್ತೆ ಬದಿಯಲ್ಲಿ ವಾಸ ಮಾಡುವಂತಾಗಿದೆ. ಇತ್ತ ವಿಜಯಪುರ ನಗರದಲ್ಲಿ ಹತ್ತಕ್ಕೂ ಅಧಿಕ ಬಡವಾಣೆಗಳಲ್ಲಿ ಸರ್ಕಾರಿ ಸೌಲಭ್ಯಗಳಿಲ್ಲದೆ ಜನರು ವಾಸ ಮಾಡುತ್ತಿದ್ದು ಮಕ್ಕಳಿಗೆ ಶಿಕ್ಷಣ ಕೂಡ ಮರಿಚಿಕೆಯಾಗಿದೆ ಎಂದು ದೂರಿದರು.
ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೇಡಿಕೆಗೆ ಸ್ಪಂದಿಸುವ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿ ಜನರನ್ನು ವಾಪಾಸಾಗುವಂತೆ ಮನವಿ ಮಾಡಿದರು.