ಮುದ್ದೇಬಿಹಾಳ(ವಿಜಯಪುರ): ಮಾಸ್ಕ್ ಡೇ ಅಂಗವಾಗಿ ಜಾಗೃತಿ ಜಾಥಾ ನಡೆಸುವ ವೇಳೆ ಮುದ್ದೇಬಿಹಾಳ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಅವರು ವ್ಯಕ್ತಿ ಮುಖಕ್ಕೆ ಟಾವೆಲ್ ಕಟ್ಟಿದ್ದಾರೆ. ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ವ್ಯಕ್ತಿ ಕಂಡು ಆತ ಹಾಕಿದ್ದ ಟಾವೆಲನ್ನೇ ಮಾಸ್ಕ್ ನಂತೆ ಮುಖಕ್ಕೆ ಕಟ್ಟುವ ಮೂಲಕ ಅರಿವು ಮೂಡಿಸಿದ್ದಾರೆ.
ಮಾಸ್ಕ್ ಹಾಕದ ವ್ಯಕ್ತಿಗೆ ಟಾವೆಲ್ ಅನ್ನೇ ಮಾಸ್ಕ್ ಮಾಡಿ ಕಟ್ಟಿದ ಶಾಸಕ - ವಿಡಿಯೋ - ಮುದ್ದೇಬಿಹಾಳ ಶಾಸಕ ನಡಹಳ್ಳಿ
ಮಾಸ್ಕ್ ಡೇ ಅಂಗವಾಗಿ ಜಾಗೃತಿ ಜಾಥಾ ನಡೆಸುವ ವೇಳೆ ಮುದ್ದೇಬಿಹಾಳ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಅವರು, ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಟಾವೆಲನ್ನೇ ಮಾಸ್ಕ್ ನಂತೆ ಕಟ್ಟುವ ಮೂಲಕ ಅರಿವು ಮೂಡಿಸಿದ್ದಾರೆ.
ಮಾಸ್ಕ್ ಹಾಕದ ವ್ಯಕ್ತಿಗೆ ಟಾವೆಲ್ ಅನ್ನೇ ಮಾಸ್ಕ್ ಮಾಡಿ ಕಟ್ಟಿದ ಶಾಸಕ
ತಾಲೂಕಾಡಳಿತದಿಂದ ಮಾಸ್ಕ್ ಡೇ ಅಂಗವಾಗಿ ಪುರಸಭೆ ನೇತೃತ್ವದಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಂತೆಗೆಂದು ಆಗಮಿಸಿದ್ದ ಗ್ರಾಮೀಣ ಪ್ರದೇಶದ ವ್ಯಕ್ತಿಯೊಬ್ಬ ಮಾಸ್ಕ್ ಹಾಕದೆ ಹೋಗುತ್ತಿದ್ದನ್ನು ಶಾಸಕರು ಕಂಡರು. ಆ ವ್ಯಕ್ತಿಯ ಕೊರಳಲ್ಲಿ ಸುತ್ತಿದ್ದ ಟಾವೆಲ್ ಅನ್ನೇ ಮಾಸ್ಕ್ ನಂತೆ ಸುತ್ತಿ ಜಾಗೃತಿ ಮೂಡಿಸಿರುವ ವಿಡಿಯೋ ವೈರಲ್ ಆಗಿದೆ.