ವಿಜಯಪುರ:ಕೊರೊನಾ ವೈರಸ್ ಭೀತಿ ನಡುವೆಯೇ ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರ ಅವರ ಪುತ್ರಿಯ ವಿವಾಹ ಸರಳವಾಗಿ ಜರುಗಿತು. ಇಂದು ನಗರ ಕಿತ್ತೂರು ರಾಣಿ ಚೆನ್ನಮ್ಮ ಮಂಗಳ ಕಾರ್ಯಾಲಯದಲ್ಲಿ ಸರಳವಾಗಿ ಮದುವೆ ಜರುಗಿದೆ.
ಕೊರೂನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಅದ್ಧೂರಿ ಮದುವೆ ಸಮಾರಂಭಗಳಿಗೆ ಕಡಿವಾಣ ಹಾಕಲಾಗಿತ್ತು. ಹೀಗಾಗಿ ಭೂಸನೂರ ಅವರು ನನ್ನ ಮಗಳ ಮದುವೆ ಬರಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದರು.
ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರ ರಮೇಶ ಭೂಸನೂರು ಅವರು ತಮ್ಮ ತಾಯಿಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಹೀಗಾಗಿ ನಾನು ಅನಿವಾರ್ಯವಾಗಿ ಮದುವೆ ಮಾಡಲೇ ಬೇಕಿದೆ. ಮುಂದೂಡಲು ಆಗುತ್ತಿಲ್ಲ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಸಮಾರಂಭಕ್ಕೆ ಹೆಚ್ಚಿನ ಜನ ಸೇರದಂತೆ ನಿಗಾ ವಹಿಸಲು ಮಾಜಿ ಶಾಸಕ, ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು.
ಇಂದು 12 ಗಂಟೆಗೆ ಮದುವೆ ಮುಗಿಸಿಕೊಂಡು ವಧು-ವರ ಹಾಗೂ ಮಾಜಿ ಶಾಸಕ ಭೂಸನೂರು ಕುಟುಂಬ ಮನೆಗೆ ತೆರಳಿತು.