ಕರ್ನಾಟಕ

karnataka

ETV Bharat / state

ಕೊರೊನಾದಿಂದ ಬೀದಿಗೆ ಬಿದ್ದ ಅಲೆಮಾರಿ ಕುಟುಂಬದ ಬದುಕು: ನೆರವಿಗಾಗಿ ಮೊರೆ - ಕೊರೊನಾ ಲಾಕ್ಡೌನ್

ಇಲ್ಲಿನ ಘಾಳಪೂಜಿಯಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಸೇರಿ ಅಂದಾಜು ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಊಟವಿಲ್ಲದೇ ಪರದಾಡುವ ದುಃಸ್ಥಿತಿ ಎದುರಾಗಿದೆ. ಹಳ್ಳಿ ಹಳ್ಳಿಗೆ ತೆರಳಿ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದ ಕುಟುಂಬ ಈಗ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ತಲುಪಿದೆ. ಇದರಿಂದ ತಾಲೂಕು ಆಡಳಿತ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

The life of a nomadic family down the street from Corona: waiting for aid
ಕೊರೊನಾದಿಂದ ಬೀದಿಗೆ ಬಿದ್ದ ಅಲೆಮಾರಿ ಕುಟುಂಬದ ಬದುಕು: ನೆರವಿಗಾಗಿ ಮೊರೆ

By

Published : Apr 20, 2020, 10:08 PM IST

ವಿಜಯಪುರ/ಮುದ್ದೇಬಿಹಾಳ: ಕೊರೊನಾ ವೈರಸ್​​ನಿಂದಾಗಿ ತಾಲೂಕಿನಲ್ಲಿ ಅಲೆಮಾರಿ ಜನಾಂಗದ ಹತ್ತಕ್ಕೂ ಹೆಚ್ಚು ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ.

ಇಲ್ಲಿನ ಘಾಳಪೂಜಿಯಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಸೇರಿ ಅಂದಾಜು ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಊಟವಿಲ್ಲದೇ ಪರದಾಡುವ ದುಃಸ್ಥಿತಿ ಎದುರಾಗಿದೆ. ಹಳ್ಳಿ ಹಳ್ಳಿಗಳಲ್ಲಿ ದುರಗಮುರಗಿ ಆಟ, ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುವ ಇವರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಚಿಕ್ಕಪುಟ್ಟ ಮಕ್ಕಳಿಗೆ ಆಹಾರ ಕೊಡಲಾಗದೇ ಈ ಜನಾಂಗದವರು ದಿನವೂ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

ಕೊರೊನಾದಿಂದ ಬೀದಿಗೆ ಬಿದ್ದ ಅಲೆಮಾರಿ ಕುಟುಂಬದ ಬದುಕು: ನೆರವಿಗಾಗಿ ಮೊರೆ

ಬಿಜ್ಜೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಈ ಘಾಳಪೂಜಿ ಗ್ರಾಮದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸವಾಗಿದ್ದಾರೆ. ತಾಲೂಕು ಆಡಳಿತದಿಂದ ನಮಗೆ ಆಹಾರಧಾನ್ಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಅಲೆಮಾರಿ ಜನಾಂಗದವರು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details