ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಕುರಿತು ಸೋನಿಯಾ ಗಾಂಧಿಗೆ ಎಂ. ಬಿ ಪಾಟೀಲ್ ಪತ್ರ ಬರೆದಿದ್ದಾರೆ ಎಂಬ ಆರೋಪ ಪ್ರಕರಣ ಈಗ ಚುನಾವಣಾ ಆಯೋಗದ ಮೆಟ್ಟಿಲೇರಿದೆ.
ಪ್ರತ್ಯೇಕ ಧರ್ಮ ಕುರಿತು ಸೋನಿಯಾಗೆ ಪತ್ರ ಆರೋಪ : ಇಸಿ ಮೊರೆ ಹೋದ ಎಂ. ಬಿ ಪಾಟೀಲ್
ಲಿಂಗಾಯುತ ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ಸೋನಿಯಾ ಗಾಂಧಿಗೆ ಎಂ. ಬಿ ಪಾಟೀಲ್ ಪತ್ರ ಬರೆದಿದ್ದಾರೆ ಎನ್ನುವ ಆರೋಪ ಕುರಿತು ಕೇಂದ್ರ ಹಾಗೂ ರಾಜ್ಯ ಚುನಾವಣಾಧಿಕಾರಿಗಳಿಗೆ ಇಂದು ದೂರು ನೀಡಿದ್ದಾರೆ.
ಎಂ. ಬಿ ಪಾಟೀಲ್
ಈ ಪ್ರಕರಣ ಸಂಬಂಧ ಕೇಂದ್ರ ಹಾಗೂ ರಾಜ್ಯ ಚುನಾವಣಾಧಿಕಾರಿಗಳಿಗೆ ಸಚಿವ ಎಂ. ಬಿ ಪಾಟೀಲ್ ದೂರು ನೀಡಿದ್ದಾರೆ.
ಸುದೀರ್ಘ 6 ಪುಟಗಳ ದೂರು ಸಲ್ಲಿಕೆ ಮಾಡಿದ ಎಂ. ಬಿ ಪಾಟೀಲ್ ತಮ್ಮ ಮೇಲಿನ ಆರೋಪ ಸುಳ್ಳು ಎಂದು ಉಲ್ಲೇಖಿಸಿದ್ದಾರೆ. ನಿನ್ನೆಯಷ್ಟೇ ವಿಜಯಪುರದ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಎಂ ಬಿ ಪಾಟೀಲ್ ಇಂದು ಚುನಾವಣಾಧಿಕಾರಿಗಳ ಮೊರೆ ಹೋಗಿದ್ದಾರೆ.