ವಿಜಯಪುರ: ಕಾಲುವೆ ನಿರ್ಮಾಣದಿಂದ ಹೊಲಗಳಿಗೆ ಹೋಗುವ ದಾರಿ ಬಂದ್ ಆಗಿದೆ. ಕಾಲುವೆಗೆ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವಿಜಯಪುರ ಜಿಲ್ಲಾ ಘಟಕದ ಮುಖಂಡರು ಆಲಮಟ್ಟಿ ಕೃಷ್ಣಾ ಜಲ ನಿಗಮ ಮಂಡಳಿಯ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಮನವಿ - Farmers protest news in vijayapura
ಕಾಲುವೆ ನಿರ್ಮಾಣಕ್ಕೂ ಮುನ್ನ ರಸ್ತೆ ಚೆನ್ನಾಗಿತ್ತು. ಈಗ ಸಂಪೂರ್ಣ ಹದಗೆಟ್ಟು ಹೋಗಿದೆ. ತಕ್ಷಣ ಬೊಮ್ಮನಹಳ್ಳಿಯ ಬಸವ ಶಾಖಾ ಕಾಲುವೆಗೆ ಸೇತುವೆ ನಿರ್ಮಿಸಬೇಕೆಂದು ಮನವಿಯಲ್ಲಿ ರೈತರು ಆಗ್ರಹಿಸಿದ್ದಾರೆ.
ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಬಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಗೆ ಅಡ್ಡಲಾಗಿ ಹಾಯ್ದು ಹೋಗಿರುವ ಮುಳವಾಡ ಏತ ನೀರಾವರಿಯ ಬಸವ ಶಾಖಾ ಕಾಲುವೆ ನಿರ್ಮಾಣಗೊಂಡಿರುವುದರಿಂದ ಹಲವು ರೈತರು ಕಾಲುವೆ ದಾಟಿ ತಮ್ಮ ಜಮೀನುಗಳಿಗೆ ಹೋಗುತ್ತಿದ್ದರು. ಕಾಲುವೆ ನಿರ್ಮಾಣದಿಂದ ಜಮೀನುಗಳ ರಸ್ತೆ ಬಂದ್ ಆಗಿ ಮುಳ್ಳುಕಂಟಿ ಬೆಳೆದು ನಿಂತು ನಿತ್ಯ ರೈತರು ತೊಂದರೆ ಅನುಭವಿಸುವಂತಾಗಿದೆ.
ಕಾಲುವೆ ನಿರ್ಮಾಣಕ್ಕೂ ಮುನ್ನ ರಸ್ತೆ ಚೆನ್ನಾಗಿತ್ತು. ಈಗ ಸಂಪೂರ್ಣ ಹದಗೆಟ್ಟು ಹೋಗಿದೆ. ತಕ್ಷಣ ಬೊಮ್ಮನಹಳ್ಳಿಯ ಬಸವ ಶಾಖಾ ಕಾಲುವೆಗೆ ಸೇತುವೆ ನಿರ್ಮಿಸಬೇಕೆಂದು ಮನವಿಯಲ್ಲಿ ರೈತರು ಆಗ್ರಹಿಸಿದ್ದಾರೆ. ಈ ವೇಳೆ ರೈತ ಮುಖಂಡರಾದ ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಪಾಟೀಲ, ಬಸಗೊಂಡಪ್ಪ ಡಿಗ್ಗಾವಿ, ರೇವಣಸಿದ್ದಪ್ಪ ಅರಳಿ, ಶ್ರೀಶೈಲ ಅವಟಿ, ಸಿದ್ದಪ್ಪ ಜಕ್ಕನಾಳ, ಮಲ್ಲಿಕಾರ್ಜುನ ಜಕ್ಕನಾಳ ಇನ್ನಿತರರು ಉಪಸ್ಥಿತರಿದ್ದರು.