ಕರ್ನಾಟಕ

karnataka

ETV Bharat / state

ಶಾಲೆಯ ಕೊಠಡಿ ಹಿಂದೆ ಏಕಾಏಕಿ ಬೆಂಕಿ: ಭಾರೀ ಅನಾಹುತ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿ - The fire broke out behind

ಶಾಲೆಯ ಅಡುಗೆ ಕೋಣೆಯಲ್ಲಿ ಎರಡು ತುಂಬಿದ ಸಿಲಿಂಡರ್‌ಗಳು ಇದ್ದವು. ಅಲ್ಲದೇ ಅಡುಗೆ ಸಾಮಗ್ರಿ ಸಂಗ್ರಹಿಸಲಾಗಿತ್ತು. ಅದರ ಅನತಿ ದೂರದಲ್ಲಿಯೇ ಇಡೀ ತಾಲೂಕಿಗೆ ಪುಸ್ತಕ ಸರಬರಾಜು ಮಾಡುವ ಗೋಡೌನ್ ಇತ್ತು. ಸ್ವಲ್ಪ ವಿಳಂಬವಾಗಿದ್ದರೂ ಅನಾಹುತ ಸಂಭವಿಸುತ್ತಿತ್ತು ಎಂದು ಅಗ್ನಿಶಾಮಕ ಅಧಿಕಾರಿ ಪ್ರಮೋದ ಬಿ.ಎಸ್. ತಿಳಿಸಿದರು.

ಸಿಬ್ಬಂದಿ
ಸಿಬ್ಬಂದಿ

By

Published : Apr 10, 2021, 10:53 PM IST

ಮುದ್ದೇಬಿಹಾಳ:ಪಟ್ಟಣದ ಆರ್.ಎಂ.ಎಸ್.ಎ ಶಾಲೆಯ ಅಡುಗೆ ಕೋಣೆಯ ಹಿಂಭಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಶನಿವಾರ ಸಂಜೆ ನಡೆದಿದೆ.

ಪಟ್ಟಣದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕಾಂಪೌಂಡ್​​ ಬಳಿ ಅಪರಿಚಿತರು ಬೀಡಿ, ಸಿಗರೇಟ್ ಸೇದಿ ಎಸೆದ ಪರಿಣಾಮ ಒಣ ಕಸಕ್ಕೆ ಬೆಂಕಿ ಹೊತ್ತಿಕೊಂಡು ವಿಸ್ತರಿಸುತ್ತಾ ಸಾಗಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ.

ಭಾರಿ ಅನಾಹುತ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿ

ಶಾಲೆಯ ಅಡುಗೆ ಕೋಣೆಯಲ್ಲಿ ಎರಡು ತುಂಬಿದ ಸಿಲಿಂಡರ್‌ಗಳು ಇದ್ದವು. ಅಲ್ಲದೇ ಅಡುಗೆ ಸಾಮಗ್ರಿ ಸಂಗ್ರಹಿಸಲಾಗಿತ್ತು. ಅದರ ಅನತಿ ದೂರದಲ್ಲಿಯೇ ಇಡೀ ತಾಲೂಕಿಗೆ ಪುಸ್ತಕ ಸರಬರಾಜು ಮಾಡುವ ಗೋಡೌನ್ ಇತ್ತು. ಸ್ವಲ್ಪ ವಿಳಂಬವಾಗಿದ್ದರೂ ಅನಾಹುತ ಸಂಭವಿಸಿ ಶಾಲೆಯ ದಾಖಲೆಗಳಿಗೆ, ಅಡುಗೆ ಕೋಣೆಗೆ ಬೆಂಕಿ ವ್ಯಾಪಿಸುತ್ತಿತ್ತು ಎಂದು ಅಗ್ನಿಶಾಮಕ ಠಾಣೆಯ ಅಧಿಕಾರಿ ಪ್ರಮೋದ ಬಿ.ಎಸ್. ತಿಳಿಸಿದರು.

ABOUT THE AUTHOR

...view details