ವಿಜಯಪುರ: ಅನ್ನದಾತನಿಗೆ ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಲು ಸಹಾಯವಾಗಬೇಕಾಗಿದ್ದ ಕೃಷಿ ಮೇಳ, ವಾಣಿಜ್ಯ ವಸ್ತುಗಳ ಮಾರಾಟಕ್ಕೆ ದಾರಿ ಮಾಡಿಕೊಟ್ಟಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ರೈತರ ಆಕ್ರೋಶಕ್ಕೆ ಕಾರಣವಾಯ್ತು ಕೃಷಿ ಮೇಳ: ಇದೇ ಕಾರಣಕ್ಕೆ ಅಸಮಾಧಾನ - ವಿಜಯಪುರ ವಾಣಿಜ್ಯ ವಸ್ತುಗಳ ಮಾರಾಟ
ಅನ್ನದಾತನಿಗೆ ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಲು ಸಹಾಯವಾಗಬೇಕಾಗಿದ್ದ ಕೃಷಿ ಮೇಳ, ವಾಣಿಜ್ಯ ವಸ್ತುಗಳ ಮಾರಾಟಕ್ಕೆ ದಾರಿ ಮಾಡಿಕೊಟ್ಟಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಹೊರವಲಯದ ಹಿಟ್ನಳ್ಳಿ ಫಾರಂನಲ್ಲಿ ಕೃಷಿ ಮಹಾವಿದ್ಯಾಲಯ ಮೂರು ದಿನಗಳ ಕಾಲ ಆಯೋಜಿಸಿರುವ ಕೃಷಿ ಮೇಳ ರೈತರ ಕೋಪಕ್ಕೆ ಕಾರಣವಾಗಿದೆ. ಸುಮಾರು 70 ರಿಂದ 80 ಮಳಿಗೆ ಹಾಕಲು ಮಹಾವಿದ್ಯಾಲಯ ಅವಕಾಶ ಮಾಡಿಕೊಟ್ಟಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಮಳಿಗೆಗಳು ಗೃಹೋಪಯೋಗಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಚಟ್ನಿ, ಚಾಟ್ಸ್, ಬಟ್ಟೆ ಮಾರಾಟದ ಮಳಿಗೆಗಳು ರಾರಾಜಿಸುತ್ತಿವೆ. ಇದರಿಂದ ಕೃಷಿ ಉಪಕರಣಗಳ ಮಾಹಿತಿ ಪಡೆಯಲು ಬಂದಿದ್ದ ರೈತರಲ್ಲಿ ನಿರಾಸೆ ಮೂಡಿಸಿತು.
ರೈತರಿಗೆ ಕೃಷಿ ಉಪಕರಣಗಳ ಕುರಿತು ಮಾಹಿತಿ ಕೊರತೆ ಕಂಡುಬಂದಿತು. ಲಕ್ಷಾಂತರ ರೂ. ಖರ್ಚು ಮಾಡಿ ಕೃಷಿ ಮೇಳ ಆಯೋಜನೆ ಮಾಡಿದ್ದರೂ, ಇದರ ಬಗ್ಗೆ ಪ್ರಚಾರ ಇಲ್ಲದಿರು ವುದರಿಂದ ಅನೇಕ ರೈತರಿಗೆ ಮಾಹಿತಿ ಕೊರತೆ ಉಂಟಾಯಿತು.