ವಿಜಯಪುರ:ಚಡಚಣ ಪೊಲೀಸ್ ಠಾಣೆಯ ಪೇದೆ ಚನ್ನಪ್ಪ ಕಲ್ಲಪ್ಪ ಕುಂಬಾರ(36) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
PSI ದೈಹಿಕ ಪರೀಕ್ಷೆ ಹಾಜರಾಗಿ ಬರುವ ವೇಳೆ ಹೃದಯಾಘಾತದಿಂದ ಪೇದೆ ಸಾವು - vijayyapura police constable death news
ಪಿಎಸ್ಐ ದೈಹಿಕ ಪರೀಕ್ಷೆ ಮುಗಿಸಿ ಕಲಬುರಗಿಯಿಂದ ಬಸ್ನಲ್ಲಿ ಬರುವ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ಪೇದೆಯೊಬ್ಬರು ಸಾವನ್ನಪ್ಪಿದ್ದಾರೆ.
ಪೊಲೀಸ್ ಪೇದೆ ಚನ್ನಪ್ಪ ಕಲ್ಲಪ್ಪ ಕುಂಬಾರ
ಕಲಬುರಗಿಯಲ್ಲಿ ನಡೆಯುತ್ತಿರುವ PSI ದೈಹಿಕ ಪರೀಕ್ಷೆ ಮಗಿಸಿಕೊಂಡು ಮರಳುತ್ತಿರುವಾಗ ಹೃದಯಾಘಾತವಾಗಿದೆ. ದೈಹಿಕ ಪರೀಕ್ಷೆ ಮುಗಿಸಿ ಸರ್ಕಾರಿ ಬಸ್ನಲ್ಲಿ ವಾಪಸ್ ಆಗುವಾಗ ಅಫಜಲಪುರ ಬಳಿ ಎದೆನೋವು ಕಾಣಿಸಿಕೊಂಡಿದ್ದರಿಂದ ಅಲ್ಲಿಯೇ ಬಸ್ನಿಂದ ಇಳಿದು ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ತೀವ್ರ ಎದೆನೋವಿನಿಂದ ಪೇದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.