ಕರ್ನಾಟಕ

karnataka

ETV Bharat / state

ಬಸ್​​ನಲ್ಲಿ ಬಿಟ್ಟು ಬಂದಿದ್ದ ಬ್ಯಾಗ್​​ಅನ್ನು ಪ್ರಯಾಣಿಕರಿಗೆ ಮರಳಿಸಿದ ಬಸ್​ ಸಿಬ್ಬಂದಿ

ಬಸ್‌ವೊಂದರಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಬ್ಯಾಗನ್ನು ಅವರಿಗೆ ಮರಳಿಸುವ ಮೂಲಕ ಬಸ್​ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ..

The bus staff returned the bag to the passenger
ಬಸ್​​ನಲ್ಲಿ ಬಿಟ್ಟು ಬಂದಿದ್ದ ಬ್ಯಾಗ್​​ಅನ್ನು ಪ್ರಯಾಣಿಕರಿಗೆ ಮರಳಿಸಿದ ಬಸ್​ ಸಿಬ್ಬಂದಿ

By

Published : Nov 11, 2020, 6:51 PM IST

ಮುದ್ದೇಬಿಹಾಳ: ಕರ್ನಾಟಕ ಸಾರಿಗೆ ಇಲಾಖೆಯ ಮಂಗಳೂರು-ಮುದ್ದೇಬಿಹಾಳ ಮಾರ್ಗದ ಬಸ್‌ನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಹಣ, ಚಿನ್ನ ಇದ್ದ ಬ್ಯಾಗನ್ನು ಮಾಲೀಕರಿಗೆ ಮರಳಿಸುವ ಮೂಲಕ ಬಸ್​ ಚಾಲಕ-ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಬಸ್‌ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದ ಕೆರೂರ ಸಮೀಪದ ಜಮ್ಮನಕಟ್ಟಿಯ ಬಸವರಾಜ ಮರಿಯಪ್ಪ ಕಬ್ಬಲಗೇರಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಹಾಗೂ ನನ್ನ ತಾಯಿ ಕುಂದಾಪುರದಿಂದ ನಮ್ಮೂರು ಜಮ್ಮನಕಟ್ಟಿಗೆ ಹೋಗಲೆಂದು ಮಂಗಳೂರು-ಮುದ್ದೇಬಿಹಾಳ ಬಸ್​​​ ಅನ್ನು ಹತ್ತಿದ್ದೆವು. ಕೌಟುಂಬಿಕ ಸಮಸ್ಯೆಯಿಂದಾಗಿ ಅವಸರವಸರವಾಗಿ ಕೆರೂರಿನಲ್ಲಿ ಬ್ಯಾಗ್ ಬಿಟ್ಟು ಇಳಿದಿದ್ದೇವೆ.

ಬ್ಯಾಗ್​​ಅನ್ನು ಪ್ರಯಾಣಿಕರಿಗೆ ಮರಳಿಸಿದ ಬಸ್​ ಸಿಬ್ಬಂದಿ

ಬಳಿಕ ಬ್ಯಾಗ್ ಬಿಟ್ಟು ಬಂದಿದ್ದ ಬಗ್ಗೆ ಟಿಕೆಟ್ ಹಿಂದೆ ಇದ್ದ ಸಹಾಯವಾಣಿಗೆ ಕರೆ ಮಾಡಿದಾಗ ಮುದ್ದೇಬಿಹಾಳ ಡಿಪೋ ಸಂಪರ್ಕಿಸಲು ತಿಳಿಸಿದರು. ಅಷ್ಟರಲ್ಲಾಗಲೇ ಬಸ್‌ನ ನಿರ್ವಾಹಕ, ಚಾಲಕರು ಕರೆ ಮಾಡಿ ಬ್ಯಾಗ್ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡಿದರು. ಬ್ಯಾಗ್‌ನಲ್ಲಿದ್ದ ವಸ್ತುಗಳು, ಚಿನ್ನ, ಹಣ ಸುರಕ್ಷಿತವಾಗಿದ್ದು ಸಾರಿಗೆ ಇಲಾಖೆಯ ನೌಕರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಬಸ್‌ನ ನಿರ್ವಾಹಕ ಬಿ.ಎಸ್. ಬಿರಾದಾರ, ಚಾಲಕರಾದ ಅಶೋಕ ಧರಿಗೌಡರ, ಪಿ.ಎಸ್. ಹೆಳವರ ಅವರು, ಬಸ್‌ನಲ್ಲಿ ಬ್ಯಾಗ್ ಬಿಟ್ಟು ಕೆರೂರಿನಲ್ಲಿ ಇಳಿದಿದ್ದ ಪ್ರಯಾಣಿಕರಿಗೆ ನಮ್ಮ ಮೇಲಾಧಿಕಾರಿಗಳ ಮಾರ್ಗದರ್ಶನದ ಸೂಚನೆ ಮೇರೆಗೆ ಕರೆ ಮಾಡಿ ಅವರಿಗೆ ಮಾಹಿತಿ ನೀಡಿ ಬ್ಯಾಗ್ ಅವರಿಗೆ ಒಪ್ಪಿಸಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ಮೇಲ್ವಿಚಾರಕ ಬಾಪುಗೌಡ ಪಾಟೀಲ, ಸಿಬ್ಬಂದಿ ಎಚ್.ಡಿ. ಪತ್ತಾರ, ಎನ್.ಆರ್. ಶಿವಳ್ಳಿ, ಬಸವರಾಜ ಬೇನಾಳ, ಆರ್.ಎಂ. ಮುದ್ದೇಬಿಹಾಳ ಮೊದಲಾದವರು ಇದ್ದರು.

ABOUT THE AUTHOR

...view details