ಮುದ್ದೇಬಿಹಾಳ:ತಾಳಿಕೋಟಿ ಪಟ್ಟಣದ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.
ಕೊಣ್ಣೂರ ಕ್ಷೇತ್ರದ ರಾಮನಗೌಡ ಇಂಗಳಗಿ ಎಂಟು ಮತಗಳಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಹನಮಂತ ನಾಯ್ಕಮಕ್ಕಳ ಆಯ್ಕೆಯಾಗಿದ್ದಾರೆ.

ಲಾಟರಿ ಅದೃಷ್ಟದಲ್ಲಿ ಉಪಾಧ್ಯಕ್ಷರಾಗಿ ಎರಡನೇ ಅವಧಿಗೆ ಪುನಾರಾಯ್ಕೆಯಾದ ಹನಮಂತ ನಾಯ್ಕಮಕ್ಕಳ ಅವರು ಏಳು ಹಾಗೂ ಪ್ರತಿಸ್ಪರ್ಧಿ ಬೀರಪ್ಪ ಯರಝರಿಗೆ ಏಳು ಮತಗಳು ಬಂದ ಹಿನ್ನೆಲೆಯಲ್ಲಿ ಲಾಟರಿ ಪ್ರಕ್ರಿಯೆ ನಡೆಸಲಾಯಿತು.
ಅದರಲ್ಲಿ ಹನಮಂತ ನಾಯ್ಕಮಕ್ಕಳ ಅವರ ಹೆಸರು ಚೀಟಿಯಲ್ಲಿ ಬಂದ ಹಿನ್ನೆಲೆಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅನಿಲ್ ಕುಮಾರ ಢವಳಗಿ ಘೋಷಿಸಿದರು.