ಕರ್ನಾಟಕ

karnataka

ETV Bharat / state

ವಿಜಯಪುರ: ಬಾಲಮಂದಿರದ 10 ಬಾಲಕಿಯರಿಗೆ ಕೊರೊನಾ

ಈ ಬಾಲಮಂದಿರದಲ್ಲಿ ಒಟ್ಟು 40 ವಿದ್ಯಾರ್ಥಿನಿಯರು ಹಾಗೂ 12 ಜನ ಸಿಬ್ಬಂದಿ ವಾಸವಿದ್ದಾರೆ.

Dc
Dc

By

Published : Apr 13, 2021, 9:07 PM IST

ವಿಜಯಪುರ: ನಗರದ ಜಿಲ್ಲಾ ಪಂಚಾಯಿತಿ ಬಳಿಯ ಸರ್ಕಾರಿ ಬಾಲಮಂದಿರದ 10 ಬಾಲಕಿಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಾಲಮಂದಿರವನ್ನು ಸೂಕ್ಷ್ಮ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಆದೇಶಿಸಿದ್ದಾರೆ.

ಈ ಬಾಲಮಂದಿರದಲ್ಲಿ ಒಟ್ಟು 40 ವಿದ್ಯಾರ್ಥಿನಿಯರು ಹಾಗೂ 12 ಜನ ಸಿಬ್ಬಂದಿ ವಾಸವಿದ್ದಾರೆ. ಇವರನ್ನು ಗಣೇಶ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟ್​​​ಗೆ ಒಳಪಡಿಸಲಾಗಿತ್ತು. ಇವರಲ್ಲಿ 10 ಬಾಲಕಿಯರ ವರದಿ ಪಾಸಿಟಿವ್ ಬಂದಿದೆ.

ಇಂದು ಓರ್ವ ಸಾವು:

ಇಂದು ವಿಜಯಪುರ ಜಿಲ್ಲೆಯಲ್ಲಿ 105 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕೊವಿಡ್ ಚಿಕಿತ್ಸೆ ಫಲಕಾರಿಯಾಗದೇ ಓರ್ವ ಸಾವನ್ನಪ್ಪಿದ್ದಾನೆ.

ಇಲ್ಲಿಯವರೆಗೆ ಸಾವಿನ ಸಂಖ್ಯೆ 212ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ 15780 ಜನರಿಗೆ ಸೋಂಕು ತಗುಲಿದೆ. ಅವರಲ್ಲಿ 14931 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸದ್ಯ637 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details