ವಿಜಯಪುರ:ಬೈಕಿಗೆ ಕೋಳಿ ಸಾಗಾಣಿಕೆ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ-ಬಿಜ್ಜರಗಿ ಮಧ್ಯೆ ನಡೆದಿದೆ.
ಟೆಂಪೊ ಬೈಕ್ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲಿಯೇ ಸಾವು - ತಿಕೋಟಾದ ಬಾಬಾನಗರ ಬಿಜ್ಜರಗಿ
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ-ಬಿಜ್ಜರಗಿ ಮಧ್ಯೆ ಬೈಕಿಗೆ ಕೋಳಿ ಸಾಗಾಣಿಕೆ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ನಡೆದಿದೆ.
ಟೆಂಪೊ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ಭೀಮಣ್ಣ ಸೂರಪ್ಪ ಸಿಂಧೂರ(48) ಮೃತಪಟ್ಟ ವ್ಯಕ್ತಿ. ಕೊಟ್ಟಲಗಿಯಿಂದ ಬಿಜ್ಜರಗಿ ಮಾರ್ಗವಾಗಿ ತಿಕೋಟಾ ಕಡೆಗೆ ಬರುತ್ತಿದ್ದ ಬೈಕ್ ತಿಕೋಟಾದಿಂದ ಬಾಬಾನಗರ ಮಾರ್ಗವಾಗಿ ಬಿಜ್ಜರಗಿ ಕಡೆಗೆ ಹೊರಟಿದ್ದ ಕೋಳಿ ಸಾಗಿಸುವ ಟೆಂಪೊಗೆ ಡಿಕ್ಕಿಯಾಗಿ ಈ ದುರ್ಘಟನೆಗಳನ್ನು ಸಂಭವಿಸಿದೆ.
ಇನ್ನು, ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.