ಕರ್ನಾಟಕ

karnataka

ETV Bharat / state

ವಿಜಯಪುರ ಮರ್ಯಾದಾ ಹತ್ಯೆ: ಆರೋಪಿಗಳ ಪತ್ತೆಗೆ ತಂಡ ರಚನೆ - ವಿಜಯಪುರ ಸುದ್ದಿ

ವಿಜಯಪುರ ಜಿಲ್ಲೆಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ತನಿಖೆ ನಡೆಸಲು ಮೂರು ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದೆ. ಈ ಮೂರು ತಂಡಗಳಿಗೆ ಚಡಚಣ ಸಿಪಿಐ ಚಿದಂಬರಂ ನೇತೃತ್ವ ವಹಿಸಿದ್ದಾರೆ.

ಆರೋಪಿಗಳ ಪತ್ತೆಗೆ ತಂಡ ರಚನೆ
ಆರೋಪಿಗಳ ಪತ್ತೆಗೆ ತಂಡ ರಚನೆ

By

Published : Jun 23, 2021, 6:49 PM IST

ವಿಜಯಪುರ: ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದೆ. ದೇವರಹಿಪ್ಪರಗಿ ಠಾಣೆ ಪಿಎಸ್ಐ, ಆಲಮೇಲ ಪಿಎಸ್‌ಐ, ಕಲಕೇರಿ ಪಿಎಸ್ಐ ಒಳಗೊಂಡ ಮೂರು ತಂಡಗಳು ರಚನೆ ಮಾಡಲಾಗಿದೆ.

ವಿಜಯಪುರ ಲಾಡ್ಜ್, ಮಾರ್ಕೆಟ್, ದೇಗುಲದಲ್ಲಿ ತನಿಖೆ ನಡೆಸುತ್ತಿರುವ ದೇವರಹಿಪ್ಪರಗಿ ಪಿಎಸ್ಐ ರವಿ ಯಡವನ್ನವರ್ ಹುಡುಕಾಟ ಮುಂದುವರೆಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಆರೋಪಿಗಳ ಪತ್ತೆಗೆ ಆಲಮೇಲ ಪಿಎಸ್ಐ ಸುರೇಶ ಗಡ್ಡಿ ಬಲೆ ಬೀಸಿದ್ದಾರೆ.

ಭೀಕರ ಹತ್ಯೆ ನಡೆದ ಸಲಾದಹಳ್ಳಿ ಗ್ರಾಮದ ಸುತ್ತ ಆರೋಪಿಗಳ ಪತ್ತೆಗೆ ಪಿಎಸ್ಐ ಗಂಗೂಬಾಯಿ ಬಿರಾದಾರ್ ಜಾಲ ಬೀಸಿದ್ದಾರೆ. ಈ ಮೂರು ತಂಡಗಳಿಗೆ ಚಡಚಣ ಸಿಪಿಐ ಚಿದಂಬರಂ ನೇತ್ರತ್ವದ ವಹಿಸಿದ್ದಾರೆ. 24 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸಲು ಖಾಕಿ ಪಡೆ ಸಿದ್ದವಾಗಿದೆ.

ಇದನ್ನು ಓದಿ:ವಿಜಯಪುರದಲ್ಲಿ ನಡೆಯಿತಾ ಮರ್ಯಾದಾ ಹತ್ಯೆ? : ಜಮೀನಲ್ಲೇ ಉಸಿರು ಚೆಲ್ಲಿರುವ ಪ್ರೇಮಿಗಳು..!

ನಿನ್ನೆ ಸಲಾದಹಳ್ಳಿಯ ಹೊರವಲಯದಲ್ಲಿ ಬಸವರಾಜ್ (19), ದಾವಲಭಿ (18) ಪ್ರೇಮಿಗಳ ಭೀಕರ ಹತ್ಯೆ ನಡೆದಿತ್ತು. ಚೂರಿಯಿಂದ ಚುಚ್ಚಿ, ಹೊಡೆದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಪ್ರೇಮಿಗಳನ್ನು ಕೊಂದು ಹಾಕಿದ್ದರು.

ಪ್ರಕರಣದ ಮುಖ್ಯ ಆರೋಪಿ ಯುವತಿ ತಂದೆ ಬಂದಗಿಸಾಬ್, ಅಣ್ಣ ದಾವಲ್‌ ಪಟೇಲ್, ಅಳಿಯ ರಫೀಕ್, ಅಲ್ಲಾಪಟೇಲ್ ಲಾಳಸಾಬ್​ಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ABOUT THE AUTHOR

...view details