ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಯಂತೆ ಗುರುಸ್ಪಂದನ ಬಳಗದ ಅಭ್ಯರ್ಥಿಗಳು ಮೊದಲ ಬಾರಿಗೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣದ ಅಂಜುಮನ್ ಇಸ್ಲಾಮ್ ಕಮಿಟಿ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿ ನಡೆದ ಮತ ಎಣಿಕೆ ಕಾರ್ಯ ರಾತ್ರಿ 12ಕ್ಕೆ ಮುಕ್ತಾಯಗೊಂಡಿತು. ಗುರುಸ್ಪಂದನ ಬಳಗದ ಆರು ಸದಸ್ಯರು ಹಾಗೂ ಮಹಿಳೆಯರ ವಿಭಾಗದಲ್ಲಿ ಮೂವರು ಆಯ್ಕೆಯಾಗುವ ಮೂಲಕ ಒಂಭತ್ತು ಜನ ಆಯ್ಕೆಯಾಗಿದ್ದಾರೆ.
ಸ್ವಾಭಿಮಾನಿ ಶಿಕ್ಷಕರ ಬಣದಲ್ಲಿ ಇಬ್ಬರು ಮಹಿಳೆಯರು, ನಾಲ್ವರು ಪುರುಷ ಸದಸ್ಯರು ಆಯ್ಕೆಯಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಚುನಾವಣಾಧಿಕಾರಿ ಸುರೇಶ ಸುಳಕೋಡ, ಮಧ್ಯರಾತ್ರಿ 12ರವರೆಗೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ. 683 ಜನ ತಮ್ಮ ಹಕ್ಕು ಚಲಾಯಿಸಿದ್ದರು ಎಂದು ಹೇಳಿದರು.