ಕರ್ನಾಟಕ

karnataka

ETV Bharat / state

ಅಕ್ಕ-ಪಕ್ಕ ಶೌಚಾಲಯ ಬೇಡ.. ಶಿಕ್ಷಕಿಯರು, ಪೋಷಕರಿಂದ ಪ್ರತಿಭಟನೆ - ಯರನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಹೆಣ್ಣುಮಕ್ಕಳ ಶೌಚಾಲಯದ ಪಕ್ಕದಲ್ಲೇ ಗಂಡುಮಕ್ಕಳ ಶೌಚಾಲಯ ನಿರ್ಮಿಸಿದ್ರೆ, ಹೆಣ್ಣುಮಕ್ಕಳಿಗೆ ಮುಜುಗುರ ಉಂಟಾಗಲಿದೆ. ಹೀಗಾಗಿ ಈ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು..

Protest by teachers, parents In Vijayapur
ಅಕ್ಕ-ಪಕ್ಕ ಶೌಚಾಲಯ ಬೇಡ...ಶಿಕ್ಷಕಿಯರು, ಪೋಷಕರಿಂದ ಪ್ರತಿಭಟನೆ

By

Published : Jul 24, 2020, 7:07 PM IST

ವಿಜಯಪುರ :ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯರನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಶೌಚಾಲಯದ ಪಕ್ಕದಲ್ಲಿ ಬಾಲಕರ ಶೌಚಾಲಯ ನಿರ್ಮಿಸುತ್ತಿರುವುದನ್ನು ಖಂಡಿಸಿ ಶಾಲೆಯ ಶಿಕ್ಷಕಿಯರು ಬಿಇಒ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

ಅಕ್ಕ-ಪಕ್ಕ ಶೌಚಾಲಯ ಬೇಡ.. ಶಿಕ್ಷಕಿಯರು, ಪೋಷಕರಿಂದ ಪ್ರತಿಭಟನೆ

ಯರನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಶೌಚಾಲಯದ ಪಕ್ಕದಲ್ಲಿ ಬಾಲಕರ ಶೌಚಾಲಯ ನಿರ್ಮಿಸಲು ಮುಂದಾಗಿದ್ದು, ಇದಕ್ಕೆ ಶಾಲಾ ಮಕ್ಕಳು, ಪೋಷಕರು ಹಾಗೂ ಶಿಕ್ಷಕಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಹೆಣ್ಣುಮಕ್ಕಳ ಶೌಚಾಲಯದ ಪಕ್ಕದಲ್ಲೇ ಗಂಡುಮಕ್ಕಳ ಶೌಚಾಲಯ ನಿರ್ಮಿಸಿದ್ರೆ, ಹೆಣ್ಣುಮಕ್ಕಳಿಗೆ ಮುಜುಗುರ ಉಂಟಾಗಲಿದೆ. ಹೀಗಾಗಿ ಈ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಬಾಗೇವಾಡಿ ಬಿಇಒ, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಈ ವೇಳೆ ಶಿಕ್ಷಕಿಯೊಬ್ಬರು ಬಿಇಒ ಕಾರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿ, ಬಿಇಒ ವಿರುದ್ದ ಘೋಷಣೆ ಕೂಗಿದರು.

ABOUT THE AUTHOR

...view details