ಕರ್ನಾಟಕ

karnataka

ETV Bharat / state

ತಹಶೀಲ್ದಾರ್‌ಗೆ ಕೈ ಮುಗಿದು ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೇಳಿದ ಶಿಕ್ಷಕರು!

ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ಸೋಮವಾರ ಮಸ್ಟರಿಂಗ್ ಕಾರ್ಯದ ವೇಳೆ ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ತೆರಳಲು ಅಗತ್ಯ ಸಾಮಗ್ರಿ ಪಡೆದುಕೊಳ್ಳುವ ಸಂದರ್ಭದಲ್ಲಿ ಕೆಲ ಶಿಕ್ಷಕರು ವಿವಿಧ ಕಾರಣ ನೀಡಿ ಚುನಾವಣಾ ಕರ್ತವ್ಯದಿಂದ ತಮಗೆ ವಿನಾಯ್ತಿ ನೀಡಬೇಕು ಎಂದು ತಹಶೀಲ್ದಾರರನ್ನು ಕೇಳಿದ್ದಾರೆ.

teachers-asks-for-election-duty-exemption
teachers-asks-for-election-duty-exemption

By

Published : Dec 21, 2020, 6:41 PM IST

ಮುದ್ದೇಬಿಹಾಳ (ವಿಜಯಪುರ):ತಾಲೂಕಿನ ಇಪ್ಪತ್ತು ಗ್ರಾಪಂಗಳಿಗೆ ಹೊಸ ಸದಸ್ಯರ ಆಯ್ಕೆಗೆ ಡಿ. 22ರಂದು ಮತದಾನ ನಡೆಯಲಿದ್ದು, ಕರ್ತವ್ಯಕ್ಕೆ ನಿಯೋಜಿಸಿದ್ದ ಕೆಲವರು ಚುನಾವಣಾ ಕರ್ತವ್ಯದಿಂದ ತಮಗೆ ವಿನಾಯ್ತಿ ನೀಡಬೇಕು ಎಂದು ಕೆಲವು ಕಾರಣಗಳನ್ನು ಹೇಳಿದ ಘಟನೆ ನಡೆದಿದೆ.

ಮದುವೆ ಇದೆ, ವಿನಾಯ್ತಿ ಕೊಡಿ:

ಮನೆಯಲ್ಲಿ ಮಗನ ಮದುವೆ ಇದೆ. ನಮಗೆ ಚುನಾವಣಾ ಕೆಲಸದಿಂದ ವಿನಾಯಿತಿ ನೀಡುವಂತೆ ಸರೂರ ಎಲ್.ಟಿ. ಶಾಲೆಯ ಶಿಕ್ಷಕ ಮಹಾಂತೇಶ ಎ. ಧನ್ನೂರ ಹಾಗೂ ಅವರ ಪತ್ನಿ ಜಮ್ಮಲದಿನ್ನಿ ತಹಸೀಲ್ದಾರ್‌ಗೆ ಮನವಿ ಮಾಡಿದರು. ಮದುವೆ ಡಿ. 24ರಂದು ಇದ್ದು, ಮದುವೆ ಕಾರ್ಯಗಳ ಸಿದ್ಧತೆಗೆ ಇರಬೇಕಾಗುತ್ತದೆ. ವಿನಾಯಿತಿ ನೀಡುವಂತೆ ಗೋಗರೆದರೂ ತಕ್ಷಣಕ್ಕೆ ತಹಶೀಲ್ದಾರ್​ಗೆ ವಿನಾಯಿತಿ ನೀಡಲಿಲ್ಲ.

ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೇಳಿದ ಶಿಕ್ಷಕರು

ವರ್ಷದ ಮಗು ಹೊತ್ತುಕೊಂಡ ಬಂದ ಶಿಕ್ಷಕಿ:

ತಾಲೂಕಿನ ಬಲದಿನ್ನಿ ಎಚ್.‌ಪಿ.ಎಸ್.‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿದ್ದಮ್ಮ ನಾಡಗೌಡ ಎಂಬುವರು ತಮ್ಮ ಒಂದು ವರ್ಷದ ಮಗುವನ್ನು ಚುನಾವಣಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ತಮಗೆ ಒಂದು ವರ್ಷದ ಮಗುವಿದ್ದು, ಬಿದರಕುಂದಿಗೆ ಚುನಾವಣಾ ಕರ್ತವ್ಯಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಸೇವೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ತಹಶೀಲ್ದಾರ್‌ರರು ಬೇರೊಬ್ಬ ಶಿಕ್ಷಕರನ್ನು ಅಲ್ಲಿಗೆ ತೆರಳುವುದಕ್ಕೆ ಒಪ್ಪಿಸಿ ಕರೆದುಕೊಂಡು ಬಂದರೆ ಕರ್ತವ್ಯದಿಂದ ವಿನಾಯಿತಿ ನೀಡುವುದಾಗಿ ಸೂಚಿಸಿದ ಘಟನೆ ನಡೆಯಿತು.

ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ಸೋಮವಾರ ಮಸ್ಟರಿಂಗ್ ಕಾರ್ಯದ ವೇಳೆ ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ತೆರಳಲು ಅಗತ್ಯ ಸಾಮಗ್ರಿ ಪಡೆದುಕೊಳ್ಳುವ ಸಂದರ್ಭದಲ್ಲಿ ಇಂತಹ ಸನ್ನಿವೇಶ ಕಂಡು ಬಂದಿತು. ಕಾಲೇಜಿನ ಮೇಲ್ಮಹಡಿಯಲ್ಲಿ ಕಾಯ್ದಿರಿಸಿದ ಸಿಬ್ಬಂದಿಯನ್ನು ಗೈರು ಉಳಿದವರ ಜಾಗಕ್ಕೆ ತಹಸೀಲ್ದಾರ್‌ರರು ಕಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ನಮಗೆ ಅನಾರೋಗ್ಯವಿದೆ, ಮನೆಯಲ್ಲಿ ಕಾರ್ಯಕ್ರಮ ಇದೆ ಎಂದು ಚುನಾವಣಾ ಕೆಲಸದಿಂದ ವಿನಾಯ್ತಿ ನೀಡುವಂತೆ ಬೇಡಿಕೊಂಡರು.

ಇದಕ್ಕೆ ಕೆಲವರ ಮನವಿಯನ್ನು ಪರಿಶೀಲಿಸಿದ ತಹಶೀಲ್ದಾರ್ ಅರಕೇರಿ, ಚುನಾಣೆ ಬಂದಾಗಲಷ್ಟೇ ಈ ಜ್ವರ, ಶುಗರ್, ಬಿಪಿ ಬರುತ್ತವೆಯೇ ಎಂದು ಪ್ರಶ್ನಿಸಿದರು. ಕೆಲವರಿಗೆ ತಹಶೀಲ್ದಾರ್ ಕಾರಣಗಳನ್ನು ಹೇಳದೇ ಮೊದಲು ಹೋಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದರು. ಜಿಲ್ಲಾ ಚುನಾವಣಾ ನೋಡಲ್ ಅಧಿಕಾರಿ ಸಿದ್ಧರಾಮ ಮಾರಿಹಾಳ, ತಹಶೀಲ್ದಾರ್ ಎಂ.ಎಸ್.ಅರಕೇರಿ, ಸಿಪಿಐ ಆನಂದ ವಾಘಮೋಡೆ, ಪಿಎಸ್​ಐ ಮಲ್ಲಪ್ಪ ಮಡ್ಡಿ, ಶಿರಸ್ತೇದಾರ ಎ.ಹೆಚ್.ಬಳೂರಗಿ, ಕಂದಾಯ ನಿರೀಕ್ಷಕ ಎನ್.ಬಿ.ದೊರೆ, ವೆಂಕಟೇಶ ಅಂಬಿಗೇರ ಮೊದಲಾದವರು ಉಪಸ್ಥಿತರಿದ್ದರು.

ABOUT THE AUTHOR

...view details