ವಿಜಯಪುರ:ಜೀವನದಲ್ಲಿ ಜುಗುಪ್ಸೆಗೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿಕ್ಷಕನ ಮೃತದೇಹ ಪತ್ತೆಯಾಗಿದೆ.
ಜಿಲ್ಲೆಯ ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದ ಬಳಿನ ಕೃಷ್ಣಾ ನದಿಯ ದಡದಲ್ಲಿ ಶಿಕ್ಷಕನ ಮೃತದೇಹ ಪತ್ತೆಯಾಗಿದ್ದು, ಮೃತರನ್ನು ಕೊಲ್ಹಾರ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಾಳಪ್ಪ ದಳವಾಯಿ ಎಂದು ಗುರುತಿಸಲಾಗಿದೆ.
'ನನ್ನ ಸಾವಿಗೆ ನಾನೇ ಕಾರಣ. ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾವು ಯಾವುದೇ ತಪ್ಪು ಮಾಡಿಲ್ಲ. ನನ್ನ ಹೆಂಡತಿ-ಮಕ್ಕಳು, ಸ್ನೇಹಿತರು ಹಾಗೂ ಶಿಕ್ಷಕ ವೃಂದಕ್ಕೂ ಕೋಟಿ ವಂದನೆಗಳು. ನನಗೆ ಬರುವ ಸೌಲಭ್ಯಗಳನ್ನು ತನ್ನ ಕುಟುಂಬಕ್ಕೆ ಒದಗಿಸಿಕೊಡಿ' ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.