ವಿಜಯಪುರ: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಶಿಕ್ಷಕ ಹಾಗೂ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಬೇವನೂರ್ ಬಸ್ ನಿಲ್ದಾಣ ಬಳಿ ನಡೆದಿದೆ.
ಶಿಕ್ಷಕ ಶಿವಪ್ಪ ಈರಪ್ಪ ಜಾಮಗೊಂಡ ಹಾಗೂ ರಾಹುಲ್ ಅಶೋಕ ನಾಯ್ಕೋಡಿ ಮೃತರು ಎಂದು ಗುರುತಿಸಲಾಗಿದೆ. ಶಿಕ್ಷಕ, ವಿದ್ಯಾರ್ಥಿಯೊಂದಿಗೆ ಬೈಕ್ನಲ್ಲಿ ಸೋಲಾಪುರದಿಂದ ವಿಜಯಪುರಕ್ಕೆ ತೆರಳುತ್ತಿದ್ದರು. ಈ ವೇಳೆ, ಎದುರಿಗೆ ಬಂದ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಗುರು -ಶಿಷ್ಯ ಸಾವನ್ನಪ್ಪಿದ್ದಾರೆ.